ಇತರೆ

ಹೊಸಂಗಡಿ ಮೆಟ್ಕಲ್ ಗುಡ್ಡ ಟ್ರೆಕ್ಕಿಂಗ್ ಹೋಗಿದ್ದ ಕುಂದಾಪುರದ ಮಹಿಳೆ ನದಿಯಲ್ಲಿ ಮುಳುಗಿ ಸಾವು

Views: 273

ಕುಂದಾಪುರ: ಹೊಸಂಗಡಿಯ ಭಾಗಿಮನೆ ಬಳಿ ಟ್ರೆಕ್ಕಿಂಗ್ ಹೋಗಿದ್ದ ಮಹಿಳೆಯೊಬ್ಬರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಮಾ.1ರ ರವಿವಾರ ನಡೆದಿದೆ.

ಕುಂದಾಪುರ ನಗರದ ಪುರಸಭಾ ಮುಖ್ಯ ರಸ್ತೆಯ ಹಳೆ ಬಸ್ ನಿಲ್ದಾಣದ ವಠಾರದ ಪನ್ನೀರ್ ಜುವೆಲ್ಲರ್ಸ್ ಎದುರು ಇರುವ ಮಯೂರ ಮೆಡಿಕಲ್ಸ್ ಮಾಲಕಿ ಶುಭಶ್ರೀ ಕಾರಂತ್ ( 53) ಹೊಸಂಗಡಿ ಬಳಿಯ ಮೆಟ್ಕಲ್ ಗುಡ್ಡೆಗೆ ಚಾರಣದ ತಂಡದೊಟ್ಟಿಗೆ ತೆರಳುವಾಗ ನದಿಯಲ್ಲಿ ಮುಳುಗಿ ಮೃತ ಪಟ್ಟಿದ್ದಾರೆಂದು ತಿಳಿದುಬಂದಿದೆ.

ಮೃತದೇಹವನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಮಾಸೆಬೈಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಕಲೆಹಾಕಿದ್ದಾರೆ.

 

Related Articles

Back to top button
error: Content is protected !!