ತುಳುನಾಡಿನ ಜನರ ಆಕ್ರೋಶಕ್ಕೆ ಕಾರಣವಾದ ರಣ್‌ವೀರ್ ಸಿಂಗ್ ಹೇಳಿಕೆ..’ಕಾಂತಾರ’ ಅಭಿಮಾನಿಗಳಿಂದ ಆಕ್ರೋಶ, ಭಾರೀ ವೈರಲ್!
Views: 65
ಕನ್ನಡ ಕರಾವಳಿ ಸುದ್ದಿ: ‘ಕಾಂತಾರ’ ಪ್ರೀಕ್ವೆಲ್‌ನಲ್ಲಿ ಬರುವ ಚಾವುಂಡಿ ದೈವವನ್ನು ‘ದೆವ್ವ’ಎಂದು ಬಾಲಿವುಡ್ ನಟ ರಣ್‌ವೀರ್ ಸಿಂಗ್ ಹೇಳಿರುವುದು ವಿವಾದ ಸೃಷ್ಟಿಸಿದ್ದು, ತುಳುನಾಡಿನ ಜನರ ಆಕ್ರೋಶಕ್ಕೂ ಕಾರಣವಾಗಿದೆ.

ನಟ ರಣವೀರ್ ಸಿಂಗ್ ನಟ ರಿಷಬ್ ಶೆಟ್ಟಿ ಅವರ ಮುಂದೆಯೇ ದೈವವನ್ನು ದೆವ್ವವೆಂದು ಹೇಳಿದ್ದಾರೆ. ಕೆಟ್ಟದಾಗಿ ಮುಖ ಮಾಡಿ ದೈವವನ್ನು ಅನುಕರಿಸಿದ್ದರು. ತುಳುನಾಡ ಜನರ ಆರಾಧನೆಗೆ ಅಪಮಾನಿಸಿದ್ದಕ್ಕೆ ಭಕ್ತರು, ‘ಕಾಂತಾರ’ ಅಭಿಮಾನಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಹೀಗಿದ್ದಾಗಲೇ ರಣವೀರ್ ಸಿಂಗ್ ಅವರಿಗೆ ದೈವವೇ ಬುದ್ಧಿ ಕಲಿಸಿದೆ. ತಕ್ಕ ಶಾಸ್ತಿ ಮಾಡಿದೆ ಎಂಬ ಪರಿಕಲ್ಪನೆಯಡಿ ರಚಿಸಿದ AI ಫೋಟೋ ಭಾರೀ ವೈರಲ್ ಆಗುತ್ತಿದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಿದೆ ಎಂದು ನೆಟ್ಟಿಗರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಮುಂದೆ ವೇದಿಕೆ ಮೇಲಿದ್ದ ರಣವೀರ್ ಸಿಂಗ್ ಹೆಣ್ಣು ದೈವವನ್ನು ದೆವ್ವವೆಂದು ಕರೆದಿದ್ದರು. ಸಿನಿಮಾದಲ್ಲಿ ರಿಷಬ್ ನಟನೆ ಅನುಕರಣೆ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡರು. ಕೆಟ್ಟದಾಗಿ ಮುಖ ಮಾಡಿ ತೋರಿಸಿದ್ದರು. ಈ ರೀತಿ ಅನುಕರಿಸದಂತೆ ರಿಷಬ್ ಶೆಟ್ಟಿ ಅವರು ತಿಳಿಸಿದ್ದರು. ವೇದಿಕೆ ಮುಂಭಾಗದವರಿಗೂ ರಣವೀರ್ ವರ್ತನೆ ಕಸಿವಿಸಿ ಉಂಟು ಮಾಡಿತ್ತು.

ಅಪಾರ ಜನರಿಂದ ರಣವೀರ್ ಸಿಂಗ್ ಟೀಕೆ ಎದುರಿಸಬೇಕಾಯಿತು. ಇದಕ್ಕೆ ಪ್ರತ್ಯುತ್ತರ ಎಂಬಂತೆ ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾಗೆ ಅನೇಕ ಕಡೆಗಳಲ್ಲಿ ನಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಥಿಯೇಟರ್‌ಗಳಲ್ಲಿ ಜನರೇ ಇಲ್ಲ. ಇದು ಇತರ ಸಂಸ್ಕೃತಿ, ದೈವದ ಬಗ್ಗೆ ಮಾಡಿದ ಅಪಮಾನಕ್ಕೆ ಸಿಕ್ಕ ಪ್ರತಿಫಲ ಅಂತಲೂ ಕೆಲವರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಈ ಮಧ್ಯೆ ರಣವೀರ್ ಸಿಂಗ್‌ಗೆ ದೈವವೇ ಶಿಕ್ಷೆ ನೀಡಿದೆ ಎಂಬಂತೆ AI ಫೋಟೋ ರಚಿಸಲಾಗಿದೆ. ವಿಡಿಯೋ ಮೆಚ್ಚುಗೆ ವ್ಯಕ್ತವಾಗಿದ್ದು, ಭಾರೀ ವೈರಲ್ ಆಗುತ್ತಿದೆ.
ನಾವು ಎಐ ಜಮಾನದಲ್ಲಿದ್ದೇವೆ. ತಮ್ಮ ನೆಚ್ಚಿನ ಸೆಲೆಬ್ರೆಟಿ, ರಾಜಕಾರಣ, ಇಷ್ಟದ ಸಂಗತಿಗಳ ಬಗ್ಗೆ ಫ್ಯಾನ್ಸ್ ಎಐ ವಿಡಿಯೋ ಮಾಡಿ ಖಷಿಪಡುತ್ತಿದ್ದಾರೆ. ಮನರಂಜನೆ ಉದ್ದೇಶದಿಂದ ರೀತಿ ಮಾಡುತ್ತಿದ್ದು, ಸಾಕಷ್ಟು ವಿಡಿಯೋಗಳು, ಫೋಟೋಗಳು ವೈರಲ್ ಆಗುತ್ತಿವೆ. ನೋಡಲು ನಿಜವೇನೋ ಎಂಬಂತೆ ಭಾಸವಾಗುಷ್ಟು ನೈಜ ಸಂಗತಿಗೆ ಹತ್ತಿರವಾದ ವಿಡಿಯೋ, ಫೋಟೋ ಇವಾಗಿವೆ.ಕಾಡ ಮಧ್ಯ ರಣವೀರ್ ಸಿಂಗ್, ದೈವ ಹಾಗೂ ಬೆಂಕಿ ಇರುವುದು ಫೋಟೋದಲ್ಲಿ ಕಾಣಿಸುತ್ತದೆ.’






