ಸಾಮಾಜಿಕ

ತನಗಿಂತ ದುಪ್ಪಟ್ಟು ವಯಸ್ಸಿನವನನ್ನು ಮದುವೆಯಾಗಿ ಖುಷಿಯಿಂದ ಡ್ಯಾನ್ಸ್‌ ಮಾಡಿದ ವಧು:ನೆಟ್ಟಿಗರು ಶಾಕ್‌!

Views: 91

ಕನ್ನಡ ಕರಾವಳಿ ಸುದ್ಧಿ: 24 ವರ್ಷ ವಯಸ್ಸಿನ ವಧು ತನಗಿಂತ 16 ವರ್ಷ ಹಿರಿಯ ವರನನ್ನು ಮದುವೆಯಾಗಿ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾಳೆ.

ವರನು ವಧುವಿಗಿಂತ ಒಂದೆರೆಡು ದಿನಕ್ಕೆ ದೊಡ್ಡವನಾದರೂ ಮದುವೆ ಬೇಡ ಅನ್ನುವವರೇ ಜಾಸ್ತಿ. ಈ ನಡುವೆ ತನಗಿಂತ ಸುಮಾರು ದುಪ್ಪಟ್ಟು ವಯಸ್ಸಿನವನನ್ನು ಮದುವೆಯಾಗಿ ಖುಷಿಯಿಂದ ಈಕೆ ಡ್ಯಾನ್ಸ್‌ ಮಾಡುವುದನು ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ.

ಈ ವೈರಲ್ ಆದ ವಿಡಿಯೊದಲ್ಲಿ ವಧು ತನಗಿಂತ ದುಪ್ಪಟ್ಟು ವಯಸ್ಸಾದ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಇಲ್ಲಿ ವಧುವಿಗೆ 24 ವರ್ಷವಾದರೆ, ವರನಿಗೆ 40 ವರ್ಷ ವಯಸ್ಸಾಗಿದೆ. ಇಷ್ಟು ವಯಸ್ಸಿನ ಅಂತರವಿದ್ದರೂ ವಧು ಸ್ವಲ್ಪ ಕೂಡ ಬೇಸರ ಮಾಡಿಕೊಳ್ಳದೇ ಖುಷಿಯಿಂದ ಡ್ಯಾನ್ಸ್‌ ಮಾಡಿರುವುದಕ್ಕೆ ಕಾರಣ ಬೇರೆಯೇ ಇದೆಯಂತೆ. ವಧುವಿನ ಈ ಖುಷಿಗೆ ಕಾರಣ ವರ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿರುವುದು.

ನೀಲಕಮಲ್ ಸಿಂಗ್ ಅವರ ಜನಪ್ರಿಯ ಭೋಜ್ಪುರಿ ಹಾಡಾದ ʼಧಾರ್ ಕಮರ್ ರಾಜಾಜಿʼಗೆ ದಂಪತಿ ಖುಷಿಯಿಂದ ನೃತ್ಯ ಮಾಡಿದ್ದಾರೆ. ಈ ವಿಡಿಯೊ 1.8 ಮಿಲಿಯನ್ ವ್ಯೂವ್ಸ್ ಮತ್ತು ಸಾವಿರಾರು ಲೈಕ್‍ಗಳು, ಶೇರ್‌ಗಳು ಮತ್ತು ಕಾಮೆಂಟ್‍ಗಳನ್ನು ಪಡೆದಿದೆ. ಈ ವಿಡಿಯೊಗೆ ಪ್ರತಿಕ್ರಿಯಿಸಿದ ನೆಟ್ಟಿಗರಲ್ಲಿ ಕೆಲವರು ವರನ ವಯಸ್ಸನ್ನು ಗೇಲಿ ಮಾಡಿದರೆ, ಇತರರು ಮದುವೆ ನಿರ್ಧಾರಗಳಲ್ಲಿ ಸುರಕ್ಷಿತ ಉದ್ಯೋಗದ ಮಹತ್ವವನ್ನು ಎತ್ತಿ ತೋರಿಸಿದ್ದಾರೆ.

“ಇಂದಿನ ಹುಡುಗರು ಈ ವರನಿಂದ ಕಲಿಯಬೇಕು ಮತ್ತು ಗಲಾಟೆಯನ್ನು ಬಿಟ್ಟು ಒಳ್ಳೆಯ ಕೆಲಸಕ್ಕೆ ಹೋಗಬೇಕು” ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಇನ್ನೊಬ್ಬರು, “ಅದಕ್ಕಾಗಿಯೇ ನಾನು ಉದ್ಯೋಗದ ಮೇಲೆ ಗಮನ ಹರಿಸಿ ಎಂದು ಹೇಳುತ್ತೇನೆ, ರೋಸ್ ಡೇ ಬಗ್ಗೆ ಅಲ್ಲ” ಎಂದಿದ್ದಾರೆ.

Related Articles

Back to top button