ರಾಜಕೀಯ

ಡಿಕೆಶಿ ಲೆಕ್ಕಾಚಾರಕ್ಕೆ ತಬ್ಬಿಬ್ಬಾದ ದಳ-ಬಿಜೆಪಿ ಮೈತ್ರಿ ಪಡೆ :ಚನ್ನಪಟ್ಟಣದಲ್ಲಿ ಯೋಗೇಶ್ವರ್ ಎದುರಾಳಿ ಯಾರು?

Views: 82

ಕನ್ನಡ ಕರಾವಳಿ ಸುದ್ಧಿ: ಯೊಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್‌ ಮನೆ ಸೇರಿದ  ಮೇಲೆ ಚನ್ನಪಟ್ಟಣದ ಬಿಜೆಪಿ-ಜೆಡಿಎಸ್  ಮೈತ್ರಿಗೆ ಸಂಕಷ್ಟ  ತಂದೊಡ್ಡಿದೆ. ಸ್ವತಂತ್ರವಾಗಿ ಸ್ಪರ್ಧಿಸುವ ಚಾನ್ಸ್ ಬಗ್ಗೆ ಲೆಕ್ಕ ಹಾಕಿದ್ದ ಮೈತ್ರಿ ಪಡೆ, ಆ ಲೆಕ್ಕಾಚಾರಗಳನ್ನು ಕಾಂಗ್ರೆಸ್ ತಲೆಕೆಳಗೆ ಮಾಡಿದೆ.

ಅಭ್ಯರ್ಥಿ ಯಾರು ಅನ್ನೋದನ್ನು ನಿರ್ಧರಿಸುವಲ್ಲಿ ಜೆಡಿಎಸ್ ಗೆ ತಲೆನೋವು ತಂದಿದೆ.  ಕ್ಷೇತ್ರದ ಟಿಕೆಟ್ ಗೆ ನಾಲ್ವರು ಮುಂಚೂಣಿಯಲ್ಲಿದ್ದು ಯಾರಿಗೆ ಟಿಕೆಟ್ ಕೊಟ್ಟರೆ ಗೆಲ್ಲಬಹುದು ಅನ್ನೋ ಲೆಕ್ಕಾಚಾರದಲ್ಲಿ ದಳಪತಿಗಳು ಕೂತಿದ್ದಾರೆ. ಈ ನಡುವೆ ಮೊಮ್ಮಗ ನಿಖಿಲ್ ಕರೆಸಿಕೊಂಡ ಜೆಡಿಎಸ್ ವರಿಷ್ಠ ದೇವೇಗೌಡ್ರು ಚರ್ಚೆ ನಡೆಸಿರೋದು ಕುತೂಹಲಕ್ಕೆ ಕಾರಣ ಆಗಿದೆ.

ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಬಯಸಿದ್ದ ದಳಪತಿ, ಅದಕ್ಕಾಗಿ ಜೆಡಿಎಸ್‌ನಿಂದ ನಿಖಿಲ್‌ ಕುಮಾರಸ್ವಾಮಿ ನಿಲ್ಲಿಸುವ ಲೆಕ್ಕಾಚಾರ ಇತ್ತು. ಈಗ ನೇರ ಹಣಾಹಣಿ ಕಾರಣಕ್ಕೆ ಪ್ಲಾನ್ ಚೇಂಜ್ ಆಗಿದೆ. ನಿಖಿಲ್ ಬದಲಿಗೆ ಅನಿತಾ ಕುಮಾರಸ್ವಾಮಿ ಹೆಸರು ತೇಲಿ ಬರುತ್ತಿದ್ದು, ಆ ಅವಕಾಶದ ಸಾಧ್ಯತೆ ಕಡಿಮೆ ಇದೆ.. ಆದ್ರೆ 3ನೇ ಅಭ್ಯರ್ಥಿ ಮಾತ್ರ ಅಚ್ಚರಿ ಡಿ.ಕೆ.ಸುರೇಶ್ ಅವರನ್ನು ಕಟ್ಟಿ ಹಾಕಿದ್ದ ಡಾ.ಸಿ.ಎನ್‌.ಮಂಜುನಾಥ್‌ ಚುನಾವಣೆಯ ತಂತ್ರ ಬಳಸಲು ಪ್ಲಾನ್ ಏನೋ ಇದೆ. ಅದಕ್ಕಾಗಿ ಗೌಡರ ಪುತ್ರಿ ಮಂಜುನಾಥ್ರ ಪತ್ನಿ ಅನಸೂಯಾ ಹೆಸರು ಪಟ್ಟಿಯಲ್ಲಿದೆ. ಮಂಜುನಾಥ್ ಗ್ರೀನ್ ಸಿಗ್ನಲ್ ನೀಡುತ್ತಿಲ್ಲ. ಫೈನಲಿನಲ್ಲಿ ಜೆಡಿಎಸ್ ಲೋಕಲ್ ಲೀಡರ್ ಜಯಮುತ್ತು ಪರ ಗೌಡರ ಚಿತ್ತ ನೆಟ್ಟಿದೆ.

ಈ ನಾಲ್ಕು ಲೆಕ್ಕಾಚಾರಗಳು ಏನೇ ಇದ್ರೂ ಎನ್ ಡಿಎ ಸಭೆಯಲ್ಲಿ ಫೈನಲ್ ಆಗಬೇಕಿದೆ. ಮತ್ತೊಂದು ಸುತ್ತಿನ ಸಭೆ ಕರೆದಿರುವ ಕುಮಾರಸ್ವಾಮಿ  ಎನ್‌ಡಿಎ ಟಿಕೆಟ್‌ ಘೋಷಿಸುವುದು ಬಹುತೇಕ ದಟ್ಟವಾಗಿದೆ. ನಾವೆಲ್ಲಾ ಕುಳಿತು ಚರ್ಚೆ ಮಾಡುತ್ತೇವೆ ಅಂತ ಜೆಡಿಎಸ್-ಬಿಜೆಪಿ ನಾಯಕರು ಹೇಳಿದ್ದಾರೆ.ಒಟ್ಟಾರೆ, ಮೈತ್ರಿ ನಾಯಕರ ಲೆಕ್ಕಾಚಾರಗಳು ಪಲ್ಟಿ ಆಗಿದ್ದು, ಸಂದಿಗ್ಧತೆಗೆ ಸಿಲುಕಿದ್ದಾರೆ.

Related Articles

Back to top button
error: Content is protected !!