ಧಾರ್ಮಿಕ

ಜ.25 ರಂದು ಆನೆಗುಡ್ಡೆ ಶ್ರೀ ವಿನಾಯಕ ದೇವರ ಸನ್ನಿಧಿಯಲ್ಲಿ ವಕ್ವಾಡಿ ಗ್ರಾಮಸ್ಥರಿಂದ “1008 ತೆಂಗಿನಕಾಯಿ ಸಾಮೂಹಿಕ ಮೂಡು ಗಣಪತಿ ಸೇವೆ”

Views: 76

ಭಕ್ತಾಭಿಮಾನಿಗಳೇ, 

ವಕ್ವಾಡಿಯ ಸಮಸ್ತ ಗ್ರಾಮಸ್ಥರಿಂದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಊರಿನ ಜನರ ಸುಕ್ಷೇಮಕ್ಕಾಗಿ “ಸಾಮೂಹಿಕ 1008 ತೆಂಗಿನಕಾಯಿ ಮೂಡುಗಣಪತಿ ಮತ್ತು ಮುಡಿ ಅಕ್ಕಿ ಕಡಬಿನ ಸೇವೆ” ಜನವರಿ 25ರಂದು ಅಪರಾಹ್ನ 4 ಗಂಟೆಗೆ ನಡೆಯಲಿದೆ. 

ಊರಿನ ಸಮಸ್ತ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸೇವೆಯಲ್ಲಿ ಪಾಲ್ಗೊಂಡು ಶ್ರೀ ವಿನಾಯಕ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುತ್ತಿದ್ದೇವೆ.

ವಿಶೇಷ ಸೂಚನೆ: ಶ್ರೀ ಕ್ಷೇತ್ರದಲ್ಲಿ ನಡೆಯುವ ಮೂಡು ಗಣಪತಿ ಸೇವೆಗೆ ತೆಂಗಿನಕಾಯಿ, ಹೂವು, ಬಾಳೆಹಣ್ಣು, ಸೇವಾ ಕಾಣಿಕೆ ನೀಡುವವರು ವಕ್ವಾಡಿ ಶ್ರೀ ಮಹಾಲಿಂಗೇಶ್ವರ ಸಭಾಗ್ರಹ ಮತ್ತು ವಕ್ವಾಡಿ ಜನರಲ್ ಮರ್ಚೆಂಟ್ ಜಯರಾಮ್ ಶೆಟ್ಟಿ ಅವರ ಅಂಗಡಿಯಲ್ಲಿ ಜನವರಿ 24ರ ಸಂಜೆ 6 ಗಂಟೆಯೊಳಗೆ ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ವಿನಂತಿಸಿಕೊಳ್ಳಲಾಗಿದೆ. 

ಹೆಚ್ಚಿನ ಮಾಹಿತಿಗಾಗಿ;

ಗಿರೀಶ್ ಐತಾಳ್ ವಕ್ವಾಡಿ: 9449555633

ಸುಧಾಕರ ಶೆಟ್ಟಿಗಾರ್ ವಕ್ವಾಡಿ: 9900476322

——— ವಕ್ವಾಡಿಯ ಸಮಸ್ತ ಭಕ್ತಾಭಿಮಾನಿಗಳು 

Related Articles

Back to top button
error: Content is protected !!