ಸಾಮಾಜಿಕ

ಜುಲೈ 20ಕ್ಕೆ, ದ.ಕ.ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ.) ಮಂಗಳೂರು ಮತ್ತು ದ.ಕ. ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ (ರಿ.) ಉಡುಪಿ ವಾರ್ಷಿಕ ಮಹಾಸಭೆ 

Views: 80

ಕನ್ನಡ ಕರಾವಳಿ ಸುದ್ದಿ

ದ.ಕ.ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ.) ಮಂಗಳೂರು ಮತ್ತು ದ.ಕ. ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ (ರಿ.) ಉಡುಪಿ ವಾರ್ಷಿಕ ಮಹಾಸಭೆ ದಿನಾಂಕ: 20-07-2025ರ ರವಿವಾರ ಪೂರ್ವಾಹ್ನ ಗಂಟೆ 9.30ಕ್ಕೆ ತೈರೂಪಿಣಿ ರಂಗಮಂಟಪ, ಶ್ರೀ ವೀರಭದ್ರ ದುರ್ಗಾಪರಮೇಶ್ವರಿ ಮತ್ತು ಪುರಾತನ ಶ್ರೀ ಮಾರಿಯಮ್ಮ ದೇವಸ್ಥಾನ, ಸುರತ್ಕಲ್ ಇಲ್ಲಿ ನಡೆಯಲಿದೆ.

ಸಭಾಧ್ಯಕ್ಷತೆ : ಶ್ರೀ ರವಿ ಶೆಟ್ಟಿಗಾರ್ ಕಾರ್ಕಳ, ಅಧ್ಯಕ್ಷರು, ಪದ್ಮಶಾಲಿ ಮಹಾಸಭಾ, ಶ್ರೀ ಲಕ್ಷ್ಮಣ್ ಕೊಡಿಯಾಲ್‌ಬೈಲ್, ಅಧ್ಯಕ್ಷರು, ಪದ್ಮಶಾಲಿ ವಿದ್ಯಾವರ್ಧಕ ಸಂಘ, ಸಭಾ ಕಾರ್ಯಕ್ರಮದ ಉದ್ಘಾಟನೆ: ಸನ್ಮಾನ್ಯ ಡಾ| ವೈ. ಭರತ್ ಶೆಟ್ಟಿ, ಶಾಸಕರು, ಮಂಗಳೂರು ಉತ್ತರ,

ಮುಖ್ಯ ಅಭ್ಯಾಗತರು: ಶ್ರೀ ಉತ್ತಮ್ ಎ. ಶೆಟ್ಟಿಗಾರ್ ಅಧ್ಯಕ್ಷರು, ಪದ್ಮಶಾಲಿ ಸಮಾಜ ಸೇವಾ ಸಂಘ (ರಿ.) ಮುಂಬೈ, ಶ್ರೀಮತಿ ಭಾನುಮತಿ ಡಿ. ಶೆಟ್ಟಿಗಾರ್ ಅಧ್ಯಕ್ಷರು, ದ.ಕ. ಪದ್ಮಶಾಲಿ ಸಮಾಜ ಸೇವಾಕೂಟ (ರಿ.) ಬೆಂಗಳೂರು,ಶ್ರೀ ರಘುರಾಮ್ ಶೆಟ್ಟಿಗಾರ್, ಅಧ್ಯಕ್ಷರು, ಪದ್ಮಶಾಲಿ ಸಮುದಾಯ, ದುಬೈ, ಶ್ರೀ ಜೆ. ರಾಮಕೃಷ್ಣ, ಅಧ್ಯಕ್ಷರು, ಜಿಲ್ಲಾ ಪದ್ಮಶಾಲಿ (ನೇಕಾರರ) ಸಂಘ (ರಿ.) ಶಿವಮೊಗ್ಗ, ಶ್ರೀ ಕೃಷ್ಣಾನಂದ ಎಂ. ಶೆಟ್ಟಿಗಾರ್, ಹರ್ಷ್ ಪೌಂಡೇಶನ್, ಮುಂಬೈ, ಡಾ. ನಾಗರಾಜಮೂರ್ತಿ, MD,D.M. ಹೃದ್ರೋಗ ತಜ್ಞರು, ಜಯದೇವ ಆಸ್ಪತ್ರೆ, ಬೆಂಗಳೂರು,  ಶ್ರೀ ಬಿ. ಶ್ರೀನಿವಾಸ ಶೆಟ್ಟಿಗಾರ್, ರಂಗನಕೇರಿ, ಆಡಳಿತ ಮೊಕೇಸರರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಬಾರ್ಕೂರು ಉದ್ಯಮಿಗಳು, ಶೆಟ್ಟಿಗಾರ್ ಇಂಡಸ್ಟ್ರೀಸ್ ಮತ್ತು ಶೆಟ್ಟಿಗಾರ್ ಎಂಟರ್‌ಪ್ರೈಸಸ್, ಬಾರ್ಕೂರು, ಶ್ರೀ ಓಂಪ್ರಕಾಶ್ ಡಿ. ಶೆಟ್ಟಿಗಾರ್, ಅಧ್ಯಕ್ಷರು, ಶ್ರೀ ವೀರಭದ್ರ ದುರ್ಗಾಪರಮೇಶ್ವರಿ ಹಾಗೂ ಪುರಾತನ ಶ್ರೀ ಮಾರಿಯಮ್ಮ ದೇವಸ್ಥಾನ, ಸುರತ್ಕಲ್.

ಶುಭಾಶಂಸನೆ: ಶ್ರೀ ಬಿ. ರತ್ನಾಕರ ಶೆಟ್ಟಿಗಾರ್ ಯಾನೆ ಕಾಂತಣ್ಣ ಗುರಿಕಾರರು, ಮೊತ್ತೇಸರರು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ, ಕಲ್ಲಾಪು, ಹಳೆಯಂಗಡಿ

ಗೌರವ ಉಪಸ್ಥಿತಿ: ಹದಿನಾರು ಶ್ರೀ ವೀರಭದ್ರ ದೇವಸ್ಥಾನಗಳ ಆಡಳಿತ ಮೊಕೇಸರರು/ ಅಧ್ಯಕ್ಷರು/ ಗುರಿಕಾರರು ಹಾಗೂ ವಲಯ ಸಂಘಟನೆಗಳ ಅಧ್ಯಕ್ಷರುಗಳು

ಬೆಂಗಳೂರು ದಿ| ದಯಾನಂದ ಕೊಂಚಾಡಿ ಹಾಗೂ ದಿ|ವಿಮಲ ಡಿ. ಕೊಂಚಾಡಿ ಇವರಿಂದ ಪ್ರಾಯೋಜಿತ 2024-25ನೇ ಸಾಲಿನ ‘ಪದ್ಮಶಾಲಿ ಸಾಮಾಜಿಕ ನಾಯಕತ್ವ ಪ್ರಶಸ್ತಿ’ ಪುರಸ್ಕೃತರು ಶ್ರೀ. ಎಸ್ ತಿಮ್ಮಪ್ಪ ಶೆಟ್ಟಿಗಾರ್. ಮುದ್ರಾಡಿ, ವಿಶ್ರಾಂತ ಉಪತಹಶೀಲ್ದಾರರು.

ಸನ್ಮಾನಗೊಳ್ಳಲಿರುವ ಸಾಧಕರು;

ಶ್ರೀ ಚೇತನ ದೇರೆಬೈಲ್ ಮುಖ್ಯ ಮಹಾಪ್ರಬಂಧಕರು, ಕರ್ನಾಟಕ ವಿದ್ಯುಚ್ಛಕ್ತಿ ಪ್ರಸರಣ ನಿಗಮ ಬೆಂಗಳೂರು,

ಶ್ರೀ ಸದಾಶಿವ ಶೆಟ್ಟಿಗಾರ್, ಸಿದ್ದಕಟ್ಟೆ ಖ್ಯಾತ ಯಕ್ಷಗಾನ ಬಣ್ಣದ ವೇಷದಾರಿ,

ಶ್ರೀ ಗಿರೀಶ್ ನಾರಾಯಣ, ದುಬೈ ಬಹುಮುಖ ಪ್ರತಿಭಾನ್ವಿತರು,

ಶ್ರೀ ಬೆನಕ ಗಿರೀಶ್ ಶೆಟ್ಟಿಗಾರ್, ಉಡುಪಿ  ಎಂ.ಬಿ.ಎ.ಯಲ್ಲಿ ದ್ವಿತೀಯ ರ‍್ಯಾಂಕ್‌ ವಿಜೇತರು,

ಶ್ರೀ ಶೃಜಯ್ ಬಾಲಕೃಷ್ಣ ಶೆಟ್ಟಿಗಾರ್, ಮಿಜಾರು  ಸಿನಿಮಾ ನಟ

ರೂಪಶ್ರೀ, ವರ್ಕಾಡಿ  ಖ್ಯಾತ ಅಭಿನೇತ್ರಿ,

ಶ್ರೀ ಜಗದೀಶ ಶೆಟ್ಟಿಗಾರ್, ಉಪ್ಪಳ,  ಎಮ್.ಎಸ್.ಸಿ. ರಸಾಯನ ಶಾಸ್ತ್ರದಲ್ಲಿ ಪ್ರಥಮ ರ‍್ಯಾಂಕ್‌

ಡಾ| ಮಮತಾ, ಕೊಣಾಜೆ, ಆಯುರ್ವೇದದಲ್ಲಿ ಸ್ನಾತಕೋತ್ತರ ಪದವೀಧರೆ M.D. (AYU)

ಶ್ರೀ ಯೋಗೆಂದ್ರ ಶ್ರೀವತ್ಸವ ಪದ್ಮಶಾಲಿ, ಕಾರ್ಕಳ, ಖ್ಯಾತ ಶಿಲ್ಪ ಕಲಾವಿದರು.

ಶ್ರೀ ಟಿ. ಹಿರಿಯಣ್ಣ ಶೆಟ್ಟಿಗಾರ್, ಮಂದಾರ್ತಿ, ಖ್ಯಾತ ಯಕ್ಷಗಾನ ಕಲಾವಿದರು.

ಸರ್ವರಿಗೂ ಸ್ವಾಗತ ಬಯಸುವ;

ಮಹಾಸಭಾದ ಪರವಾಗಿ

ರತ್ನಾಕರ ಇಂದ್ರಾಳಿ, ಉಪಾಧ್ಯಕ್ಷರು,ಇಂದಿರಾ ಶೆಟ್ಟಿಗಾರ್, ಕಾರ್ಕಳ, ಉಪಾಧ್ಯಕ್ಷರು.ಡಾ. ಬಿ. ವೆಂಕಟ್ರಾಯ ಶೆಟ್ಟಿಗಾರ್, ಬ್ರಹ್ಮಾವರ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಶೆಟ್ಟಿಗಾರ್. ಕೋಟೇಶ್ವರ, ಜೊತೆ ಕಾರ್ಯದರ್ಶಿ ಸುಧಾಕರ ಶೆಟ್ಟಿಗಾರ್, ಸಾಲಿಕೇರಿ, ಕೋಶಾಧಿಕಾರಿ

ವಿದ್ಯಾವರ್ಧಕ ಸಂಘದ ಪರವಾಗಿ

ರಾಘವ ಎಸ್. ಶೆಟ್ಟಿಗಾರ್, ಸಾಲಿಕೇರಿ, ಉಪಾಧ್ಯಕ್ಷರು.ಉಮೇಶ್ ಕುಮಾರ್ ಮಾರ್ಪಳ್ಳಿ, ಪ್ರಧಾನ ಕಾರ್ಯದರ್ಶಿ ರಜನೀಕಾಂತ್ ಶೆಟ್ಟಿಗಾರ್ ಸಾಲಿಕೇರಿ, ಜೊತೆ ಕಾರ್ಯದರ್ಶಿನರೇಂದ್ರ ಶೆಟ್ಟಿಗಾರ್ ಹೆರ್ಗ, ಕೋಶಾಧಿಕಾರಿ

ವಿಶೇಷ ಸೂಚನೆಗಳು; 

1. 2024-25 ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.95 ಮತ್ತು ಅಧಿಕ ಅಂಕ ಗಳಿಸಿದ, ದ್ವಿತೀಯ ಪಿ.ಯು.ಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಶೇ.90 ಮತ್ತು ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ರ‍್ಯಾಂಕ್‌ ವಿಜೇತರನ್ನು ಸಮಾರಂಭದಲ್ಲಿ ಪುರಸ್ಕರಿಸಲಾಗುವುದು.

ವಿದ್ಯಾರ್ಥಿಗಳು ತಮ್ಮ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಅಂಕಪಟ್ಟಿಯ ಜೆರಾಕ್ಸ್ ಪ್ರತಿಯನ್ನು/ಯಾಂಕ್ ಪಟ್ಟಿಯ ದೃಢೀಕೃತ ಪ್ರತಿಯನ್ನು ಮತ್ತು ವ್ಯಕ್ತಿ ಪರಿಚಯ ಹಾಗೂ ಮನೆಯ ಪೂರ್ಣ ವಿಳಾಸ, ದೂರವಾಣಿ ಸಂಖ್ಯೆ ವಿವರದೊಂದಿಗೆ ಪ್ರಧಾನ ಕಾರ್ಯದರ್ಶಿ, ದ.ಕ. ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ (ರಿ), ಪದ್ಮಶಾಲಿ ಸುವರ್ಣ ಮಹೋತ್ಸವ ಭವನ, ಆದಿಉಡುಪಿ-576103, (ಉಡುಪಿ ಜಿಲ್ಲೆ) ಈ ವಿಳಾಸಕ್ಕೆ ದಿನಾಂಕ 06.07.2025ರ ಒಳಗೆ ತಲುಪುವಂತೆ ಕಳುಹಿಸಲು ಕೋರಲಾಗಿದೆ.

2. ಸಂಭಾವ್ಯ ದಾನಿಗಳಿಗೆ ’80G’ ಆದಾಯ ತೆರಿಗೆ ವಿನಾಯಿತಿ ಬಗ್ಗೆ ಮಾಹಿತಿ ನೀಡಿ ವಿದ್ಯಾನಿಧಿ ದೇಣಿಗೆ ಸಂಗ್ರಹಿಸಲು ಸಹಕಾರ ನೀಡಲು ಕೋರಿಕೆ.

3. ಪದ್ಮಶಾಲಿ ಮಹಾಸಭಾದ ಮತ್ತು ವಿದ್ಯಾವರ್ಧಕ ಸಂಘಗಳ ಸದಸ್ಯರು ತಮ್ಮ ವಿಳಾಸ ಬದಲಾಗಿದ್ದಲ್ಲಿ ಬದಲಾವಣೆಯ ವಿಳಾಸವನ್ನು ಉಭಯ ಸಂಘಗಳ ಪ್ರಧಾನ ಕಾರ್ಯದರ್ಶಿಯವರಿಗೆ/ಸಂಘದ ಕಚೇರಿಗೆ ಬರೆದು ತಿಳಿಸಬೇಕಾಗಿ ವಿನಂತಿ.

Related Articles

Back to top button