ಜನಮನ

ಜಮ್ಮು ಕಾಶ್ಮೀರದಲ್ಲಿ ಮತ್ತೆ ಭುಗಿಲೆದ್ದ ಉಗ್ರವಾದ

Views: 97

ಜಮ್ಮು ಮತ್ತು ಕಾಶ್ಮೀರ: ಕೇಂದ್ರಾಡಳಿತ ಪ್ರದೇಶವಾದ ಜಮ್ಮು- ಕಾಶ್ಮೀರದಲ್ಲಿ ಅಶಾಂತಿ ಮತ್ತೆ ಭುಗಿಲೆದ್ದಿದೆ. ಪಾಕಿಸ್ತಾನದಿಂದ ನುಸುಳುತ್ತಿರುವ ಭಯೋತ್ಪಾದಕರು ಸರಣಿ ದಾಳಿ ನಡೆಸಿ, ನಾಗರಿಕರು ಮತ್ತು ಯೋಧರ ಸಾವಿಗೆ ಕಾರಣವಾಗುತ್ತಿದ್ದಾರೆ. ಮಂಗಳವಾರ ದೋಡಾ ಜಿಲ್ಲೆಯಲ್ಲಿ ನಡೆದ ಉಗ್ರ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಈಚೆಗೆ ಕಥುವಾದಲ್ಲಿ ನಡೆದ ಸೇನಾ ವಾಹನದ ಮೇಲಿನ ದಾಳಿಯಲ್ಲಿ ಐವರು ಸಾವಿಗೀಡಾಗಿ, ಹಲವು ಯೋಧರು ಗಾಯಗೊಂಡಿದ್ದರು.

ಲೋಕಸಭೆ ಚುನಾವಣೆಯ ಬಳಿಕ ಅಂದರೆ, ಜೂನ್ ರಂದು ಫಲಿತಾಂಶದ ದಿನ ವೈಷ್ಣೋದೇವಿಗೆ ತೆರಳುತ್ತಿದ್ದ ನಾಗರಿಕರ ಮೇಲೆ ಉಗ್ರ ದಾಳಿ ನಡೆದಿತ್ತು. ಅದರಲ್ಲಿ 9 ಮಂದಿ ಸಾವಿಗೀಡಾಗಿದ್ದರು. ಅದಾದ ಬಳಿಕ 42 ದಿನದಲ್ಲಿ ಸತತ 9 ಉಗ್ರ ದಾಳಿಗಳು ನಡೆದಿವೆ. ಇದರಲ್ಲಿ 12 ಯೋಧರು ಹುತಾತ್ಮರಾದರೆ, 13 ಮಂದಿ ಗಾಯಗೊಂಡಿದ್ದಾರೆ. 10 ನಾಗರಿಕರು ಸಾವಿಗೀಡಾದರೆ, 44 ಮಂದಿ ಗಾಯಗೊಂಡಿದ್ದಾರೆ. ಇದೇ ವೇಳೆ ಹಲವು ಉಗ್ರರನ್ನೂ ಹೊಡೆದುರುಳಿಸಲಾಗಿದ್ದು ನಿಖರ ಮಾಹಿತಿ ಸಿಕ್ಕಿಲ್ಲ.

ಕಣಿವೆಯಲ್ಲಿ ಉಗ್ರರ ಉಪಟಳ ನಿಂತಿಲ್ಲ. ಆತಂಕಕಾರಿ ವಿಚಾರವೆಂದರೆ, ಕಣಿವೆಯಲ್ಲಿ 50 ಕ್ಕೂ ಅಧಿಕ ಉಗ್ರರು ಅಡಗಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ಜೂನ್‌ ತಿಂಗಳಿನಿಂದ ಈವರೆಗೂ ಜಮ್ಮು, ಪೂಂಚ್, ರಾಜೌರಿ, ಕಥುವಾ, ದೋಡಾ ಮತ್ತು ರಿಯಾಸಿಯ ಪ್ರದೇಶಗಳಲ್ಲಿ ಭಯೋತ್ಪಾದನೆ ಸಂಬಂಧಿತ ಹಿಂಸಾಚಾರಗಳು ಹೆಚ್ಚಾಗುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಇದೇ ರೀತಿಯ ಘಟನೆಗಳು ನಡೆದಿವೆ.

 

 

 

Related Articles

Back to top button
error: Content is protected !!