ಸಾಂಸ್ಕೃತಿಕ

ಚಂದನ್‌ ಶೆಟ್ಟಿ ಜೊತೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ ‘ಸೀತಾ ವಲ್ಲಭ’ ನಟಿ ಸುಪ್ರೀತಾ ಸತ್ಯನಾರಾಯಣ್!

Views: 289

ಕನ್ನಡ ಕರಾವಳಿ ಸುದ್ದಿ: ಸೀತಾ ವಲ್ಲಭ ಧಾರಾವಾಹಿ ಮೂಲಕ ಸಖತ್ ಫೇಮಸ್ ಆಗಿದ್ದ ನಟಿ ಸುಪ್ರೀತಾ ಸತ್ಯನಾರಾಯಣ್‌ ಚಂದನ್ ಶೆಟ್ಟಿ  ಜೊತೆ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಕನ್ನಡ ಕಿರುತೆರೆ ನಟಿ ಸುಪ್ರೀತಾ ಸತ್ಯನಾರಾಯಣ್ ಸೀತಾ ವಲ್ಲಭ ಧಾರಾವಾಹಿಯಲ್ಲಿ ಮೈಥಲಿ ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದುಕೊಂಡಿದ್ದರು. ಅಲ್ಲದೇ ಗಿರೀಶ್ ವೈರಮುಡಿ ನಿರ್ದೇಶನದ ರಹದಾರಿ ಚಿತ್ರದ ಮೂಲಕ ಸಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ್ದರು. ಇದೀಗ ನಟಿ ಸುಪ್ರೀತಾ ಸತ್ಯನಾರಾಯಣ್ ಗುಟ್ಟಾಗಿ ಎಂಗೇಜ್‌ ಆಗಿದ್ದಾರೆ. ಈ ವಿಚಾರವನ್ನು ಖುದ್ದು ಕೆಲವು ದಿನಗಳ ಬಳಿಕ ಸುಪ್ರೀತಾ ಸತ್ಯನಾರಾಯಣ್ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಬಹಿರಂಗ ಪಡಿಸಿದ್ದಾರೆ.

ನಟಿ ಸುಪ್ರೀತಾ ಸತ್ಯನಾರಾಯಣ್‌ ಅವರು ಚಂದನ್‌ ಶೆಟ್ಟಿ ಎನ್ನುವವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಚಂದನ್‌ ಶೆಟ್ಟಿ ಅವರು ಇನ್‌ಸ್ಟಾಗ್ರಾಮ್ನಲ್ಲಿ ಡಿಜಿಟಲ್‌ ಕ್ರಿಯೇಟರ್‌, ಸಾಫ್ಟ್‌ವೇರ್‌ ಉದ್ಯೋಗಿ ಎಂದು ಬರೆದುಕೊಂಡಿದ್ದಾರೆ. ಕೊಡಗಿನಿಂದ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಇನ್ಸ್ಟಾ ಖಾತೆಯಲ್ಲಿ ದೇಶ ವಿದೇಶ ಸುತ್ತಿರೋ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

Related Articles

Back to top button