ಗುರುಕುಲ ಪದವಿ ಪೂರ್ವ ಕಾಲೇಜು:ಸಿಎ, ಸಿಎಸ್ ಫೌಂಡೇಶನ್ ಕೋರ್ಸಿನ ಉದ್ಘಾಟನಾ ಕಾರ್ಯಕ್ರಮ
"ನಮ್ಮ ಬದುಕಿನಲ್ಲಿ ನಾವು ಸ್ವಾವಲಂಬಿಯಾಗಿ, ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬೇಕಾದರೆ ವಿಶೇಷ ಕೌಶಲ್ಯಗಳನ್ನು ಹೊಂದಿಕೊಂಡು. ಸಿಎ, ಸಿಎಸ್ ಕೋರ್ಸಿನಿಂದ ಔದ್ಯೋಗಿಕ ಹಾಗೂ ವೈಯಕ್ತಿಕವಾಗಿಯೂ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ" -----ಸಿ.ಎ. ದೀಪಿಕಾ ವಸನಿ
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ವಕ್ವಾಡಿ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ಸಿಎ, ಸಿ ಎಸ್ ಫೌಂಡೇಶನ್ ಕೋರ್ಸಿನ ಉದ್ಘಾಟನಾ ಕಾರ್ಯಕ್ರಮವನ್ನು ಜುಲೈ 26ರಂದು ಹಮ್ಮಿಕೊಳ್ಳಲಾಗಿತ್ತು.
ಕೆ.ವಿ.ಸಿ ಸಂಸ್ಥೆಯ ಸಿ.ಎ. ದೀಪಿಕಾ ವಸನಿ ರವರು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ವೃತ್ತಿಪರತೆಗಾಗಿ ಸಿಎ, ಸಿಎಸ್ ಫೌಂಡೇಶನ್ ಕೋರ್ಸನ್ನು ಉದ್ಘಾಟಿಸಿ ಮಾತನಾಡುತ್ತಾ, ನಮ್ಮ ಬದುಕಿನಲ್ಲಿ ನಾವು ಸ್ವಾವಲಂಬಿಯಾಗಿರುವುದಕ್ಕೆ ಹೆಚ್ಚು ಗಮನ ಕೊಡಬೇಕು. ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬೇಕಾದರೆ ನಾವು ವಿಶೇಷ ಕೌಶಲ್ಯಗಳನ್ನು ಹೊಂದಿರಬೇಕು. ಸಿಎ, ಸಿ ಎಸ್ ಕೋರ್ಸಿನಿಂದ ಔದ್ಯೋಗಿಕ ಹಾಗೂ ವೈಯಕ್ತಿಕವಾಗಿಯೂ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದರು.
ಪ್ರಾಂಶುಪಾಲರಾದ ಡಾ. ರೂಪಾ ಶಣೈರವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸ್ವತಂತ್ರವಾಗಿ ಉತ್ತಮ ಜೀವನ ನಿರ್ವಹಣೆಗೆ ಇಂತಹ ತರಬೇತಿಗಳು ಪ್ರಸ್ತುತದಲ್ಲಿ ಹೆಚ್ಚು ಮಹತ್ವವನ್ನು ಪಡೆದುಕೊಳ್ಳುವ ಕಾರಣದಿಂದ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಲೆಕ್ಕಶಾಸ್ತ್ರ ಉಪನ್ಯಾಸಕ ಶ್ರೀ ಪ್ರಶಾಂತ ಉಪಸ್ಥಿತರಿದ್ದರು. ಅರ್ಥಶಾಸ್ತ್ರ ಉಪನ್ಯಾಸಕಿ ರಶ್ಮಿಕಾ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿದರು. ಸಂಖ್ಯಾಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಪವಿತ್ರ ಶೆಟ್ಟಿ ವಂದಿಸಿದರು.