ಇತರೆ

ಕುಂದಾಪುರ: ಬಸ್ಸಿಗೆ ಕಾಯುತ್ತಾ ಸಿಮೆಂಟ್ ಬೆಂಚ್ ಮೇಲೆ ಕುಳಿತಿದ್ದಾಗ ಕಾರು ಡಿಕ್ಕಿಯಾಗಿ ಮಹಿಳೆ ಸಾವು 

Views: 276

ಕನ್ನಡ ಕರಾವಳಿ ಸುದ್ದಿ: ಬಸ್ಸಿಗೆ ಕಾಯುತ್ತಾ ಸಿಮೆಂಟ್ ಬೆಂಚ್ ಮೇಲೆ ಕುಳಿತಿದ್ದ ಮಹಿಳೆಯೊಬ್ಬರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟ ಘಟನೆ ಶಂಕರನಾರಾಯಣದಲ್ಲಿ ನಡೆದಿದೆ.

ಮೃತರನ್ನು ತಾರೇಮರನ ಜೆಡ್ಡು ನಿವಾಸಿ ಮಂಜುಳಾ ಪೂಜಾರ್ತಿ (50) ಎಂದು ಗುರುತಿಸಲಾಗಿದೆ.

ಇವರು ಮೇ 23ರಂದು ಉಳ್ಳೂರಿನ ಗೇರು ಬೀಜ ಕಾರ್ಖಾನೆಯಲ್ಲಿ ಕೆಲಸ ಮುಗಿಸಿ, ದೈವದ ಮನೆಯ ಪೂಜೆಯ ಪ್ರಯುಕ್ತ ತಮ್ಮ ಪಾಲಿನ ಹಣವನ್ನು ಕೊಡಲು ತಮ್ಮ ಅಣ್ಣ ರಘುರಾಮ ಪೂಜಾರಿ ಅವರ ಮನೆಗೆ ಬಂದಿದ್ದರು.

ಹಣ ನೀಡಿ ಮಾತನಾಡಿಕೊಂಡ ಬಳಿಕ ಮನೆಗೆ ತೆರಳಲು ಬಸ್‌ಗಾಗಿ ಕಾಯುತ್ತಾ ರಸ್ತೆ ಬದಿಯ ಸಿಮೆಂಟ್ ಬೆಂಚ್ ಮೇಲೆ ಕುಳಿತಿದ್ದ ವೇಳೆ ಸಂಜೆ ಸುಮಾರು 4 ಗಂಟೆಗೆ ಕಾರು ಚಾಲಕ ಪ್ರಣಯ ಶೆಟ್ಟಿ ಅಂಪಾರು ಕಡೆಯಿಂದ ಶಂಕರನಾರಾಯಣ ಕಡೆಗೆ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ರಸ್ತಯ ಬಲಬದಿಗೆ ಕಾರನ್ನು ತಿರುಗಿಸಿದ ಪರಿಣಾಮ ಬಸ್ಸಿಗೆ ಕಾಯುತ್ತಾ ಕುಳಿತ್ತಿದ್ದ ಮಂಜುಳಾರವರಿಗೆ ಡಿಕ್ಕಿ ಹೊಡೆಯಿತು, ಅಪಘಾತದಿಂದ ಜೋರಾಗಿ ಶಬ್ದ ಕೇಳಿ ಉಮೇಶ್ ಶೆಟ್ಟಿ, ಸುರೇಶ್ ಮಡಿವಾಳ ಅಲ್ಲಿಗೆ ಹೋಗಿ ನೋಡಿದಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಮಂಜುಳಾರವರ ಎಡಕಾಲು ಹಾಗೂ ಕುತ್ತಿಗೆಗೆ ತೀವ್ರ ತರಹದ ಜಖಂ ಉಂಟಾಗಿದ್ದು. ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ಸ್ಥಳದಲ್ಲಿದ್ದವರು ಅವರನ್ನು ತಕ್ಷಣ ಅಂಬ್ಯುಲೆನ್ಸ್ ಮೂಲಕ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಪರೀಕ್ಷಿಸಿದ ವೈದ್ಯರು ಅವರು ಆಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಅಪಘಾತ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

 

Related Articles

Back to top button
error: Content is protected !!