ಇತರೆ

ಹುಲಿ ದಾರಿ ತಪ್ಪಿ ಜನವಸತಿ ಪ್ರದೇಶಕ್ಕೆ ನುಗ್ಗಿ ಮಹಿಳೆಯನ್ನು ಕೊಂದು ನಾಲ್ವರಿಗೆ ಗಾಯ 

Views: 69

ಕನ್ನಡ ಕರಾವಳಿ ಸುದ್ದಿ: ಹುಲಿ ಅಭಯಾರಣ್ಯದ ಬಳಿಯ ಜನವಸತಿ ಪ್ರದೇಶಕ್ಕೆ ಭಾನುವಾರ ಮುಂಜಾನೆ ಹುಲಿಯೊಂದು ದಾರಿ ತಪ್ಪಿ ನುಗ್ಗಿ, ಓರ್ವ ಮಹಿಳೆಯನ್ನು ಕೊಂದು, ಇತರೆ ನಾಲ್ವರನ್ನು ಗಾಯಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಮಹಿಳೆಯನ್ನು ಫೂಲ್ ಬಾಯಿ ಪಾಲ್ (40) ಎಂದು ಸ್ಥಳೀಯರು ಗುರುತಿಸಿದ್ದಾರೆ.

ಹುಲಿ ಅಭಯಾರಣ್ಯದ ಬಳಿಯ ಪನ್‌ಪಥ ಗ್ರಾಮದ ಖೇರ್ವಾ ಟೋಲಾ ಪ್ರದೇಶದಲ್ಲಿ ಭಾನುವಾರ ಬೆಳಗಿನಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಈ ಪ್ರದೇಶದಲ್ಲಿ ಪದೇ ಪದೆ ಹುಲಿ ದಾಳಿ ಆಗುತ್ತಿರುವುದನ್ನು ವಿರೋಧಿಸಿ ಆಕ್ರೋಶಗೊಂಡ ಸ್ಥಳೀಯರು ಅರಣ್ಯ ರಕ್ಷಕ ಹಾಗೂ ಮಹಿಳಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಅಲ್ಲದೇ, ಪ್ರತಿಭಟನಾಕಾರರು ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗೆ ಶವವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಲಾಗಿದೆ.

ಇದಕ್ಕೆ ಪ್ರತಿಯಾಗಿ, ನಾವು ಸಹಾಯಕ್ಕಾಗಿ ಪದೇ ಪದೆ ಕರೆ ಮಾಡಿದರೂ ಅರಣ್ಯ ಅಧಿಕಾರಿಗಳು ತಕ್ಷಣ ಸ್ಪಂದಿಸಲಿಲ್ಲ. ಹುಲಿ ಇನ್ನೂ ಗ್ರಾಮದ ಹತ್ತಿರದಲ್ಲೇ ಓಡಾಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

‘ಹುಲಿಯು ಒಬ್ಬ ಮಹಿಳೆಯನ್ನು ಕೊಂದು ಮೂರರಿಂದ ನಾಲ್ಕು ಜನರನ್ನು ಗಾಯಗೊಳಿಸಿದೆ. ಶವವನ್ನು ಗ್ರಾಮದಿಂದ ಹೊರಗೆ ಸ್ಥಳಾಂತರಿಸಲು ಮತ್ತು ಹುಲಿಯನ್ನು ರಕ್ಷಿಸಲು ನಾವು ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ’ ಎಂದು ಬಾಂಧವಗಢ ಹುಲಿ ಅಭಯಾರಣ್ಯದ ನಿರ್ದೇಶಕ ಅನುಪಮ್ ಸಹಾಯ್ ಅವರು ತಿಳಿಸಿದ್ದಾರೆ.

ಹುಲಿಗಳು ಪದೇ ಪದೆ ದಾಳಿ ನಡೆಸಿದ್ದರಿಂದ ಕೋಪಗೊಂಡ ಗ್ರಾಮಸ್ಥರು ಮಹಿಳಾ ಅರಣ್ಯ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ನಡೆಸಿ, ಆ ಪ್ರದೇಶದಿಂದ ಹೊರಹೋಗದಂತೆ ತಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

Related Articles

Back to top button
error: Content is protected !!