ಇತರೆ

ಕುಂದಾಪುರ: ಜನ್ನಾಡಿಯಲ್ಲಿ ಕಾರು- ಬೈಕ್ ಅಪಘಾತ ಓರ್ವ ಸಾವು, ಇನ್ನೋರ್ವ ಗಂಭೀರ 

Views: 144

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಬಿದ್ಕಲ್ ಕಟ್ಟೆ ಸಮೀಪದ ಜನ್ನಾಡಿ ಎಂಬಲ್ಲಿ ಕಾರು – ಬೈಕ್ ನಡುವೆ ಅಪಘಾತ ಸೆ.27ರಂದು ಮಧ್ಯಾಹ್ನದ ಹೊತ್ತಿಗೆ ಸಂಭವಿಸಿದೆ.

ಬೈಕ್ ನಲ್ಲಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ವ್ಯಕ್ತಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಬಿದ್ಕಲ್ ಕಟ್ಟೆ ಮೂಲಕ ಹಾಲಾಡಿ ಕಡೆ ಹೋಗುತ್ತಿದ್ದ ಕಾರು, ಹಾಲಾಡಿ ಕಡೆಯಿಂದ ಬಿದ್ಕಲ್ ಕಟ್ಟೆ ಕಡೆಗೆ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಮೃತಪಟ್ಟ ವ್ಯಕ್ತಿ ಹಾಗೂ ಗಂಭೀರ ಗಾಯಗೊಂಡ ವ್ಯಕ್ತಿ ಉಳ್ಳೂರು- 74 ಎಂಬಲ್ಲಿಯವರೆಂದು ಹೇಳಲಾಗುತ್ತಿದೆ. ಇನ್ನಷ್ಟು ವಿವರ ತಿಳಿದು ಬರಬೇಕಾಗಿದೆ.

Related Articles

Back to top button
error: Content is protected !!