ರಾಜಕೀಯ

ಇಂದು ಮುಖ್ಯಮಂತ್ರಿ ದೆಹಲಿಗೆ.. ಯಾರಿಗೆಲ್ಲಾ ನಿಗಮ? ವರಿಷ್ಠರೊಂದಿಗೆ ಖಾಲಿ ಇರುವ 2 ಸಚಿವ ಸ್ಥಾನ ಅಂತಿಮ ಪಟ್ಟಿ ಚರ್ಚೆ? 

Views: 19

ಕನ್ನಡ ಕರಾವಳಿ ಸುದ್ದಿ: ರಾಜ್ಯ ಕಾಂಗ್ರೆಸ್‌ನಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ನಿಗಮ-ಮಂಡಳಿ ಅಧ್ಯಕ್ಷರ ನೇಮಕ ಹಾಗೂ ಖಾಲಿ ಇರುವ ಎರಡು ಸಚಿವ ಸ್ಥಾನಗಳ ಭರ್ತಿಗೆ ಸಂಬಂಧಿಸಿದಂತೆ ಚರ್ಚಿಸಲು ಮುಖ್ಯಮಂತ್ರಿ ತೆರಳಲಿದ್ದಾರೆ.

ಡಿ.ಕೆ.ಶಿವಕುಮಾ‌ರ್ ದೆಹಲಿಗೆ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಹೋರಾಟಕ್ಕೆ ಸಂಬಂಧಿಸಿದಂತೆ ನಡೆಯಲಿರುವ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳುತ್ತಿ ರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ ಈ ಸಭೆಯ ಬಳಿಕ ರಾಜ್ಯದ ನಿಗಮ ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಹಾಗೂ ಎರಡು ಸಚಿವ ಸ್ಥಾನಗಳ ಭರ್ತಿಗೆ ಸಂಬಂಧಿಸಿದಂತೆ ಹೈಕಮಾಂಡ್ ‌ ನಾಯಕರೊಂದಿಗೆ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಇದಕ್ಕೆ ಪೂರಕವಾಗಿ ಸಿಎಂ ಡಿಕೆಶಿ ಸಹ, ದೆಹಲಿಯಲ್ಲಿ ಎಲ್ಲವೂ ನಿರ್ಧಾರವಾಗಲಿದ್ದು, ಪ್ರಕ್ರಿಯೆ ಶೀಘ್ರವೇ ಪೂರ್ಣ ಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್‌ನ ಹಲವು ಹಿರಿಯ ಶಾಸಕರು ಈಗಾಗಲೇ ಒಂದಿಲ್ಲೊಂದು ರೀತಿಯಲ್ಲಿ ಅಸಮಾಧಾನ ಹೊರಹಾಕುತ್ತಿದ್ದಾರೆ. ಆದ್ದರಿಂದ ಅಸಮಾಧಾನಿತ ಹಿರಿಯ ಶಾಸಕರಿಗೆ ಆಯಕಟ್ಟಿನ ನಿಗಮ ಮಂಡಳಿಗಳನ್ನು ನೀಡುವ ಮೂಲಕ ಅಸಮಾಧಾನ ತಣಿಸಲು ಸಿಎಂ ಮುಂದಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯಾರಿಗೆಲ್ಲಾ ನಿಗಮದಲ್ಲಿ ಅವಕಾಶ?

ಸದ್ಯ 88 ಮಂದಿಯ ಪಟ್ಟಿ ಸಿದ್ಧವಾಗಿದ್ದು, ಇದರಲ್ಲಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಹರಿಪ್ರಸಾದ್‌ ಅವರ ಶಿಫಾರಸಿನ ಮೇರೆಗೆ ಬಹುತೇಕ ಆಯ್ಕೆಗಳು ನಡೆದಿವೆ. ಪ್ರಥಮ ಬಾರಿಗೆ ಶಾಸಕರಾದ 6 ಮಂದಿಗೆ ಅವಕಾಶ ಕಲ್ಪಿಸಲಾಗಿದೆ. ಸುಮಾರು 22 ಮಂದಿ ಶಾಸಕರಿಗೆ ಪಟ್ಟಿಯಲ್ಲಿ ಪ್ರಾತಿನಿಧ್ಯ ಸಿಕ್ಕಿದೆ. 6 ಮಂದಿ ವಿಧಾನಪರಿಷತ್ ಸದಸ್ಯರಿಗೂ ಅವಕಾಶ ಲಭಿಸಿದೆ. ಉಳಿದಂತೆ ಕಾರ್ಯಕರ್ತರಿಗೆ ಹಾಗೂ ಇತ್ತೀಚಿಗೆ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಬಿಡುಗಡೆಯಾದವರಿಗೆ ಹಾಗೂ ಹಿಂದಿನ ಚುನಾವಣೆಗಳಲ್ಲಿ ಟೆಕೆಟ್‌ ವಂಚಿತರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಸಚಿವ ಸ್ಥಾನದ ಬಗ್ಗೆಯೂ ಚರ್ಚೆ

ಪ್ರಸ್ತುತ ಸಂಪುಟದಲ್ಲಿ 2 ಸ್ಥಾನಗಳು ಖಾಲಿ ಉಳಿದಿವೆ. ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಪ್ರಮಾಣ ವಚನ ಸ್ವೀಕರಿಸುವ ಕೊನೆಯ ಕ್ಷಣದಲ್ಲಿ ಪಟ್ಟಿಯಿಂದ ಕೈಬಿಟ್ಟಿದ್ದು ಆರೋಪಗಳ ಹಿನ್ನೆಲೆಯಲ್ಲಿ ಬಿ.ನಾಗೇಂದ್ರ ರಾಜೀನಾಮೆ ಕೊಟ್ಟಿರುವುದರಿಂದ ಸ್ಥಾನ ಖಾಲಿಯಾಗಿದೆ. ಈ ಎರಡು ಹುದ್ದೆಗಳಿಗೆ ಒಂದೆಡೆ ಬ್ಯಾಡಗಿ ಶಿವಣ್ಣ ಹಾಗೂ ಇನ್ನೊಂದೆಡೆ ಅನ್ನಪೂರ್ಣಾ ತುಕಾರಾಂ ಹೆಸರು ಮುಂಚೂಣಿಯಲ್ಲಿದ್ದು, ಈ ಕುರಿತಂತೆಯೂ ವರಿಷ್ಠರೊಂದಿಗೆ ಸಿಎಂ ಸಮಾಲೋಚನೆ ಮಾಡಬಹುದು ಎಂದು ತಿಳಿದುಕೊಂಡಿದೆ.

Related Articles

Back to top button
error: Content is protected !!