ಜನಮನ

ಗುಜರಾತ್:ಆರು ಅಂತಸ್ತಿನ ಕಟ್ಟಡ ದಿಢೀರ್ ಕುಸಿತ, ಅವಶೇಷದಡಿ ಹಲವರು ಸಿಲುಕಿರುವ ಶಂಕೆ! 

Views: 79

ಗುಜರಾತ್: ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಸೂರತ್ನಲ್ಲಿ ಅವಘಡವೊಂದು ಸಂಭವಿಸಿದೆ. ಆರು ಅಂತಸ್ತಿನ ಕಟ್ಟಡವೊಂದು ನೆಲಸಮವಾಗಿದೆ. ಪರಿಣಾಮ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಘಟನೆಯಲ್ಲಿ 15 ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸೂರತ್ ಸಚಿನ್ ಪಾಲಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. 8 ವರ್ಷಗಳ ಹಿಂದೆ ನಿರ್ಮಿಸಲಾದ ಕಟ್ಟಡ ನೆಲಸಮವಾಗಿದೆ. ಸದ್ಯ ನೆಲಸಮವಾದ ರಭಸಕ್ಕೆ ಕಾಂಕ್ರೀಟ್, ಕಲ್ಲು ಚಪ್ಪಡಿಗಳು ತುಂಡಾಗಿ ಬಿದ್ದಿದೆ.

ಇಂದು ಮಧ್ಯಾಹ್ನ ಈ ಕಟ್ಟಡ ನೆಲಸಮವಾಗಿದೆ. ಕಟ್ಟಡದ ಕೆಳಗೆ ಹಲವರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ದುರ್ಘಟನೆ ಬೆನ್ನಲ್ಲೇ ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸರು ಮತ್ತು ರಾಷ್ಟ್ರೀಯ ವಿಪತ್ತು ದಳ ದೌಡಾಯಿಸಿದೆ. ಕಟ್ಟಡದ ಕೆಳಗೆ ಸಿಲುಕಿದವರಿಗಾಗಿ ಶೋಧ ಭರದಿಂದ ಕಾರ್ಯಾಚರಣೆ ನಡೆಯುತ್ತಿದೆ.

Related Articles

Back to top button
error: Content is protected !!