ಇತರೆ

ಗಂಡ ಹೆಂಡ್ತಿ ಜಗಳ: ಹೆಂಡತಿ ಗಂಡನಿಗೆ ಕಚ್ಚಿ ನಾಲಿಗೆ ಕಳೆದುಕೊಂಡ ಗಂಡ!

Views: 59

ಕನ್ನಡ ಕರಾವಳಿ ಸುದ್ದಿ: ಮೊಟ್ಟೆ ಕರಿಗಾಗಿ ನಡೆದ ಜಗಳದ ಕಾರಣದಿಂದ ಗಂಡನೊಬ್ಬ ನಾಲಿಗೆ ಕಳೆದುಕೊಂಡ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.

ಬೇಗುಮಾಬಾದ್ ಪ್ರದೇಶದ ಸಂಜಯಪುರಿ ಪ್ರದೇಶದಲ್ಲಿ ಊಟದ ಸಮಯದಲ್ಲಿ ಎಗ್ ಕರಿಯ ಕುರಿತು ಪತಿ ಪತ್ನಿ ಜಗಳ ಮಾಡಿಕೊಂಡಿದ್ದು, ಪತ್ನಿ ಗಂಡನ ನಾಲಿಗೆಯನ್ನು ಕಚ್ಚಿದ್ದಾಳೆ. ಇದರಿಂದ ನಾಲಿಗೆ ಸಂಪೂರ್ಣ ತುಂಡಾಗಿದೆ.

ಪೊಲೀಸರು ಇಶಾಳನ್ನು ಬಂಧಿಸಿದ್ದಾರೆ. ವಿಪಿನ್ (32) ಮೀರತ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶಸ್ತ್ರಚಿಕಿತ್ಸೆಯ ಬಳಿಕವೂ ನಾಲಿಗೆಯ ಕತ್ತರಿಸಿದ ಭಾಗವನ್ನು ಮತ್ತೆ ಜೋಡಿಸಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ವಿಪಿನ್ ಮತ್ತು ಇಶಾ ಮದುವೆಯಾದ ಒಂದು ತಿಂಗಳಿನಲ್ಲೇ ಕುಟುಂಬದಲ್ಲಿ ಕಲಹ ಪ್ರಾರಂಭವಾಗಿತ್ತು. ಇಶಾ ತನಗಿಷ್ಟ ಬಂದಂತೆ ಬದುಕುತ್ತಾಳೆ. ಅವಳಿಗೆ ಏನೂ ಹೇಳುವ ಹಾಗಿಲ್ಲ. ರಹಸ್ಯವಾಗಿ ಮದ್ಯ ಮತ್ತು ಸಿಗರೇಟ್ ಸೇವಿಸಿ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಮಾಡುತ್ತಾಳೆ. ಮಗ ಆಕ್ಷೇಪಿಸಿದಾಗ ಅವನನ್ನು ಬಿಟ್ಟು ಹೋಗುವುದಾಗಿ ಬೆದರಿಕೆ ಹಾಕುತ್ತಿದ್ದಳು ಎಂದು ವಿಪಿನ್ ತಾಯಿ ಹೇಳಿದ್ದಾರೆ.

ಎಗ್ ಕರಿ ವಿಚಾರದಲ್ಲಿ ಸೋಮವಾರ ಅವರಿಬ್ಬರ ಮಧ್ಯೆ ಜಗಳವಾಗಿದೆ. ವಿಪಿನ್ ರಾತ್ರಿ 8 ಗಂಟೆ ಸುಮಾರಿಗೆ ಮನೆಗೆ ಬಂದಿದ್ದು, ಪ್ರತಿದಿನ ಮೊಟ್ಟೆ ತಿನ್ನಲು ಸಾಧ್ಯವಿಲ್ಲ ಎಂದು ಹೇಳಿದ್ದು ಇಶಾಳನ್ನು ಕೆರಳಿಸಿತ್ತು. ಇದು ಇಶಾಳ ಮದ್ಯದ ಕುಡಿಯುವ ವಿಚಾರಕ್ಕೆ ತಿರುಗಿದೆ. ಇಶಾ ಆತನಲ್ಲಿ ಕೋಳಿ ಮಾಂಸ ಆರ್ಡರ್ ಮಾಡಲು ಹೇಳಿದಳು. ಇದಕ್ಕೆ ವಿಪಿನ್ ಆಕ್ಷೇಪಿಸಿದ್ದಾನೆ. ರಾತ್ರಿ 11 ಗಂಟೆ ವೇಳೆಗೆ ಜಗಳ ತಾರಕಕ್ಕೇರಿದ್ದು, ವಿಪಿನ್ ಗೆ ಹಲವು ಬಾರಿ ಇಶಾ ಕಪಾಳಮೋಕ್ಷ ಮಾಡಿದ್ದಾಳೆ. ಅವಳನ್ನು ತಡೆಯಲು ವಿಪಿನ್ ಪ್ರಯತ್ನಿಸಿದ್ದು, ಈ ವೇಳೆ ಅವಳು ಅವನ ನಾಲಿಗೆಯನ್ನು ಬಲವಾಗಿ ಕಚ್ಚಿದ್ದಾಳೆ. ಇದರಿಂದ ವಿಪಿನ್ ಗೆ ತೀವ್ರವಾಗಿ ರಕ್ತಸ್ರಾವವಾಗಿದೆ. ಆತ ನೋವಿನಿಂದ ಕಿರುಚಿ, ನಾಲಗೆಯ ತುಂಡು ಹಿಡಿದು ಹೆತ್ತವರ ಬಳಿಗೆ ಓಡಿದನು. ರಕ್ತದ ಮಡುವಿನಲ್ಲಿದ್ದ ಆತನಿಗೆ ಮಾತನಾಡಲು ಸಾಧ್ಯವಾಗಲಿಲ್ಲ. ಬಳಿಕ ವಿಪಿನ್ ನನ್ನು ಮೀರತ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಇಶಾ ತಾನು ನಾಲಿಗೆ ಕಚ್ಚಿದ್ದಾಗಿ ಹೇಳಿದ್ದಾಳೆ ಎಂದು ಅವರು ಹೇಳಿದರು.

ವಿಪಿನ್ ನ ನಾಲಿಗೆ ಸುಮಾರು 2.5 ಸೆಂಟಿಮೀಟರ್ ನಷ್ಟು ಸಂಪೂರ್ಣವಾಗಿ ಕತ್ತರಿಸಲ್ಪಟ್ಟಿದೆ. ಇದನ್ನು ಮತ್ತೆ ಜೋಡಿಸುವುದು ಸಾಧ್ಯವಿಲ್ಲ. ಮತ್ತೆ ಎಂದಿಗೂ ಆತ ಸರಿಯಾಗಿ ಮಾತನಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಘಟನೆಯ ಬಳಿಕ ಸೊಸೆಯ ವಿರುದ್ಧ ಕೌಟುಂಬಿಕ ಹಿಂಸೆ ಮತ್ತು ಗಂಭೀರ ಗಾಯವನ್ನುಂಟು ಮಾಡಿದ್ದಾಳೆ ಎಂದು ಆರೋಪಿಸಿ ವಿಪಿನ್ ಕುಟುಂಬ ಪೊಲೀಸರಿಗೆ ದೂರು ನೀಡಿದೆ. ಬಂಧನಕ್ಕೆಂದು ಹೋದಾಗ ಇಶಾ ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೂ ಜಗಳ ಮಾಡಿದ್ದಾಳೆ. ವಿಚಾರಣೆ ವೇಳೆ ಆಕೆ ಅತ್ತೆ, ಮಾವ ನೆರೆಹೊರೆಯವರನ್ನು ಸೇರಿಸಿ ನನಗೆ ಹೊಡೆಸಿದ್ದಾರೆ. ವಿಪಿನ್ ನಾಲಿಗೆಯನ್ನು ಕಚ್ಚಿದ್ದಾಗಿ ಹೇಳಿದ್ದಾಳೆ. ಅದು ಕೋಪದ ಭರದಲ್ಲಿ ಆಗಿದೆ. ಎಂದು ಅವಳು ಪೊಲೀಸರಿಗೆ ತಿಳಿಸಿದ್ದಾಳೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Related Articles

Back to top button
error: Content is protected !!