ಸಾಂಸ್ಕೃತಿಕ

ಖ್ಯಾತ ನಟಿ ಅಮೃತಾ ಪಾಂಡೆ ಆತ್ಮಹತ್ಯೆಗೆ ಶರಣು; ನಟಿಯ ಸ್ಟೇಟಸ್ ಹಲವು ಅನುಮಾನಕ್ಕೆ ಕಾರಣ!?

Views: 204

ಪಾಟ್ನಾ: ಭೋಜ್‌ಪುರಿ ಖ್ಯಾತ ನಟಿ ಅಮೃತಾ ಪಾಂಡೆ ಅವರು ಬಿಹಾರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈನಲ್ಲಿ ನೆಲೆಸಿದ್ದ ಅಮೃತಾ ಪಾಂಡೆ ಅವರು ಕೆಲ ದಿನಗಳ ಹಿಂದೆ ಸಂಬಂಧಿಕರ ಮದುವೆಯ ಹಿನ್ನೆಲೆಯಲ್ಲಿ ಬಿಹಾರದ ಭಾಗಲ್‌ಪುರಕ್ಕೆ ಭೇಟಿ ನೀಡಿದ್ದರು. ಆದರೆ ಭಾಗಲ್‌ಪುರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಅಮೃತಾ ಪಾಂಡೆ ನೇಣಿಗೆ ಶರಣಾಗಿದ್ದಾರೆ.

ಸಾಯುವ ಮುನ್ನ, ಭೋಜ್ಪುರಿ ನಟಿ ಅಮೃತಾ ಪಾಂಡೆ ತಮ್ಮ ವಾಟ್ಸಾಪ್ ಸ್ಟೇಟಸ್ನಲ್ಲಿ, ‘ಅವನ ಜೀವನ 2 ದೋಣಿಗಳಲ್ಲಿ ಸವಾರಿ ಮಾಡುತ್ತಿದೆ, ನನ್ನ ಜೀವನವನ್ನು ಕೊನೆಗೊಳಿಸುವ ಮೂಲಕ ನಾನು ಅವನ ದಾರಿಯನ್ನು ಸುಗಮಗೊಳಿಸಿರುವೆ’ ಎಂದು ಬರೆದುಕೊಂಡಿದ್ದಾರೆ. ನಟಿಯ ಸ್ಟೇಟಸ್ ಹಲವು ಅನುಮಾನಕ್ಕೆ ಕಾರಣವಾಗಿದೆ. ನಟಿ ಸಾವಿನ ಹಿಂದೆ ತ್ರಿಕೋನ ಪ್ರೇಮಕಥೆ ಇದೆ ಎನ್ನಲಾಗ್ತಿದೆ.

ವಾಟ್ಸ್‌ಆ್ಯಪ್‌ನಲ್ಲಿ ಸ್ಟೇಟಸ್ ಹಾಕಿದ ಮೇಲೆ ತನ್ನ ರೂಮಿಗೆ ಹೋಗಿ ನೇಣಿಗೆ ಶರಣಾಗಿದ್ದಾರೆ

ಅಮೃತ ಪಾಂಡೆ ಅವರ ಸ್ನೇಹಿತರು, ಸಂಬಂಧಿಕರ ಪ್ರಕಾರ ಇತ್ತೀಚೆಗೆ ಅವರು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದರು. ಮಾನಸಿಕ ಖಿನ್ನತೆಗಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಡಿಪ್ರೆಷನ್‌ನಿಂದ ನಟಿ ಅಮೃತ ಪಾಂಡೆ ಅವರು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಅಮೃತ ಪಾಂಡೆ ಆತ್ಮಹತ್ಯೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

Related Articles

Back to top button
error: Content is protected !!