ಸಾಮಾಜಿಕ
ಕೋರ್ಟ್ ಆವರಣದಲ್ಲೇ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ
Views: 57
ಕನ್ನಡ ಕರಾವಳಿ ಸುದ್ದಿ: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಆವರಣದ ಪತ್ನಿಯನ್ನು ಕೌಟುಂಬಿ ಕನ್ಯಾಯಾಲಯ ಮಧ್ಯಸ್ಥಿಕೆ ಕೊಠಡಿಯಲ್ಲೇ ಪತಿ ಚಿರಂಜೀವಿ ಎಂಬಾತನು ಪೆಟ್ರೋಲ್ ಸುರಿದು ಹತ್ಯೆಗೆ ಯತ್ನಿಸಿದ ಘಟನೆ ಕೊಪ್ಪಳ ನಗರದಲ್ಲಿ ಬುಧವಾರ ನಡೆದಿದೆ.
ಈತ ಹಳೆ ಕುಮುಟದ ರೋಜಾ ಎಂಬಾಕೆಯನ್ನು 12 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಈ ಮಧ್ಯೆ ರೋಜಾ ಗಂಡನ ಕಿರುಕುಳಕ್ಕೆ ಬೇಸತ್ತು ಕೌಟುಂಬಿಕ ಕೋರ್ಟ್ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ಬುಧವಾರ ಅದರ ಮೊದಲ ವಿಚಾರಣೆಯಿತ್ತು. ಪತಿ-ಪತ್ನಿಗೂ ತಿಳಿವಳಿಕೆ ಹೇಳಲು ಮಧ್ಯಸ್ಥಿಕಾ ಕೊಠಡಿಯಲ್ಲಿ ಕೂರಿಸಲಾಗಿತ್ತು. ಈ ವೇಳೆ ಚಿರಂಜೀವಿ ಏಕಾಏಕಿ ತನ್ನ ಬಳಿ ಇದ್ದ ಬ್ಯಾಗ್ನಿಂದ ಬಾಟಲ್ ತೆಗೆದು ಪೆಟ್ರೋಲ್ ಅನ್ನು ಪತ್ನಿ ಹಾಗೂ ಆಕೆಯ ತಂದೆ-ತಾಯಿ ಮೇಲೆ ಸುರಿದು ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ. ವಕೀಲರು ಹಾಗೂ ಸ್ಥಳೀಯರು ಆತನ ಕೈಯಿಂದ ಲೈಟರ್ವಶಕ್ಕೆ ಪಡೆದು ಅವಘಡ ತಪ್ಪಿಸಿ, ಪತಿಯನ್ನು ಬಂಧಿಸಲಾಗಿದೆ.






