ಇತರೆ

ಕೋಟೇಶ್ವರ ಸಮೀಪ ಕಟ್ಕೆರೆಯಲ್ಲಿ 7ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

Views: 2

ಕುಂದಾಪುರ : ಕೋಟೇಶ್ವರ ಸಮೀಪ ಕಟ್ಕೆರೆಯಲ್ಲಿ ಏಳನೇ ತರಗತಿ ಶಾಲಾ ವಿದ್ಯಾರ್ಥಿನಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ.

ಕಟ್ಕೆರೆ ನಿವಾಸಿ ರಾಜಶೇಖರ್ ಅವರ ಪುತ್ರಿ ರಿಷಿಕ (13) ಮೃತ ವಿದ್ಯಾರ್ಥಿನಿ.

ಬಾಲಕಿ ಕೆಲವು ತಿಂಗಳುಗಳಿಂದ ಮಾನಸಿಕ ಖಿನ್ನತೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಳು. ಡಿ. 20ರಂದು ಶಾಲೆಯಿಂದ ಬಂದವಳು ಮನೆಯ ಸಮೀಪ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಗ್ನಿಶಾಮಕ ದಳದವರು ಮೃತ ದೇಹವನ್ನು ಮೇಲಕ್ಕೆತ್ತಿದ್ದಾರೆ.

ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!