ಕೋಟೇಶ್ವರ: ಕುದುರೆಕೆರೆ ಬೆಟ್ಟು ರಸ್ತೆಯ ಮೇಲೆ ನೀರು ಹರಿದು ಸಂಚಾರಿಗಳಿಗೆ ಭಾರಿ ತೊಂದರೆ!

Views: 97
ಕೋಟೇಶ್ವರ :ಇಲ್ಲಿನ ಕೋಟೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೃದಯ ಭಾಗವೆನಿಸಿದ ಮೆಜೆಸ್ಟಿಕ್ ಹಾಲ್ ಎದುರುಗಡೆ ಇರುವ ಕುದುರೆಕೆರೆ ಬೆಟ್ಟು ರಸ್ತೆಯಲ್ಲಿ ಸ್ವರ್ಣದುರ್ಗಾಪರಮೇಶ್ವರಿ ದೇವಸ್ಥಾನದಿಂದ ಬ್ರಹ್ಮ ಸ್ಥಾನದವರೆಗೆ ರಸ್ತೆಯ ಮೇಲೆ ಹಲವಾರು ವರ್ಷಗಳಿಂದ ಮಳೆಗಾಲದಲ್ಲಿ ನಿರಂತರವಾಗಿ ನೀರು ಹರಿದು ಬರುತ್ತಿದ್ದು,ಇದೇ ಮಾರ್ಗದಲ್ಲಿ ಸಂಚರಿಸುವ ಪಾದಾಚಾರಿಗಳಿಗೆ, ಶಾಲಾ ಮಕ್ಕಳಿಗೆ ಹಾಗೂ ವಾಹನ ಸವಾರರು ಭಯದಿಂದ ಸಂಚರಿಸುವಂತಾಗಿ ಅವರ ಸಂಕಷ್ಭ ಹೇಳತೀರದು
ಇದೇ ರಸ್ತೆಯ ಅಕ್ಕಪಕ್ಕದ 34 ಮನೆಗಳಿಗೆ ಹಾಗೂ 50 ಎಕರೆ ಕೃಷಿ ಭೂಮಿಗೆ ಹಾದುಹೋಗುವ ಪ್ರಮುಖ ರಸ್ತೆಯಾಗಿದೆ. ಇತ್ತೀಚೆಗೆ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಇಲ್ಲಿ ಸಂಚರಿಸುವ ಜನರಿಗೆ ಇನ್ನಷ್ಟು ತೊಂದರೆ ಅನುಭವಿಸುವಂತಾಗಿದೆ.
ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಈ ಸಮಸ್ಯೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸದೆ ಇರುವುದರಿಂದ ಇಲ್ಲಿನ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದಷ್ಟು ಬೇಗನೆ ಈ ಸಮಸ್ಯೆಗಳಿಗೆ ಪರಿಹಾರ ನೀಡದಿದ್ದಲ್ಲಿ ಇಲ್ಲಿನ ಜನರ ಸಂಕಷ್ಟ ತಪ್ಪಿದಲ್ಲ. ಇನ್ನು ಮುಂದಾದರೂ ಸ್ಥಳೀಯ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಕಾರ್ಯಪ್ರವೃತ್ತರಾಗಬೇಕೆಂದು ಮತ್ತೊಮ್ಮೆ ನಾಗರಿಕರು ಆಗ್ರಹಿಸಿದ್ದಾರೆ.






