ಜನಮನ

ಕೋಟೇಶ್ವರ:ಮನೆಯ ಕಿಟಕಿಯನ್ನು ಕಿತ್ತು ಒಳಗೆ ಪ್ರವೇಶಿಸಿ ಕಳವು

Views: 371

ಕುಂದಾಪುರ: ರಾಗಿಣಿ ಅವರ ತಾಯಿಯ ಕೋಟೇಶ್ವರದ ಕಲ್ಪವನ ಮನೆಯಲ್ಲಿ ಕಳ್ಳತನ ನಡೆದ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.

ಸುಮಾರು ಎರಡು ವರ್ಷಗಳಿಂದ ಈ ಮನೆಯಲ್ಲಿ ಯಾರು ವಾಸವಿಲ್ಲ ರಾಗಿಣಿಯವರು ಎರಡು ಮೂರು ತಿಂಗಳಿಗೊಮ್ಮೆ ಬಂದು ಹೋಗುತ್ತಿದ್ದರು ಜುಲೈ 8ರಂದು ಭೇಟಿ ನೀಡಿದಾಗ ಮನೆಯ ಹಿಂಬದಿಯ ಕಿಟಕಿಯನ್ನು ಕಿತ್ತು ಹಾಕಿದ್ದು ಕಂಡುಬಂದಿದ್ದು, ಒಳಗೆ ಹೋಗಿ ನೋಡಿದಾಗ 10 ಗ್ರಾಂ ತೂಕದ ನಾಗದೇವರ ಚಿನ್ನದ ಕವಚ, 2,000 ರೂಪಾಯಿ ನಗದು, ಗ್ಯಾಸ್ ಒಲೆ, ಮಿಕ್ಸಿ ,ಕುಕ್ಕರ್ ಸೇರಿದಂತೆ ಹಲವಾರು ವಸ್ತುಗಳನ್ನು ಕಳವು ಮಾಡಿದ ಕುರಿತು ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!