ಶಿಕ್ಷಣ

ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿ – ಶೆವೊಟ್ ಪ್ರತಿಷ್ಟಾನ್ ಸಹ್ಯೋಗದಲ್ಲಿ ಪ್ರತಿಭಾ ಪುರಸ್ಕಾರ

Views: 0

ಕುಂದಾಪುರ, ಫೆ.೨೭: ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿ (ರಿ) ಮತ್ತು ಶೆವೊಟ್ ಪ್ರತಿಷ್ಟಾನ್ (ರಿ)ಇವರಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಫೆ.೨೬ ರಂದು ಸಂಜೆ ಕುಂದಾಪುರ ಸಂತ ಮೇರಿಸ್ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಲಯ ಪ್ರಧಾನ ಧರ್ಮಗುರು, ಕುಂದಾಪುರ ವಲಯ ಕಥೊಲಿಕ್ ಸಭಾದ ಅಧ್ಯಾತ್ಮಿಕ ನಿರ್ದೇಶಕ  ತಾವ್ರೊ ಕಾರ್ಯಕ್ರಮವನ್ನು ಉದ್ಘಾಟಿಸಿ “ಮಕ್ಕಳ ಒಳಗೆ ಹುದುಗಿರುವ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಪ್ರೇರಣೆ ನೀಡಿದರೆ, ಮುಂದೆ ಆ ಮಗು ಆ ಕ್ಷೇತ್ರದಲ್ಲಿ ಸಾಧನೆ ಮಾಡುತ್ತದೆ, ಪ್ರತಿಭೆಗಳನ್ನು ಗುರುತಿಸಿ ಸನ್ಮಾನ ಕಾರ್ಯಗಳನ್ನು ಮಾಡಿದರೆ, ಅವರಿಗೆ ಸಾಧನೆ ಮಾಡಲು ಪ್ರೇರಿಸಿದಂತಾಗುತ್ತದೆ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ರಾಜಕಾರಣಿ ಮುತ್ಸದಿ ದಾನಿ ದಿನೇಶ್ ಹೆಗ್ಡೆ ಮೊಳಹಳ್ಳಿ ಇವರು ಪ್ರತಿಭೆಗಳನ್ನು ಸನ್ಮಾನಿಸಿ “ಇಂತಹ ಒಂದು ಪ್ರತಿಭಾವಂತರಿಗೆ ಗೌರವಿಸುವ ಉತ್ತಮ ಕಾರ್ಯಕ್ರಮ ನಡೆಸಿಕೊಂಡು ಹೋಗುತ್ತೀರುವ ಕಥೊಲಿಕ್ ಸಭಾದವರಿಗೆ ಅಭಿನಂದನೆಗಳನ್ನು ಸಲ್ಲಿಸುತೇನೆ, ಸಮಾಜದಲ್ಲಿ ಇಂತಹ ಕಾರ್ಯಗಳು ನಡೆಯುತ್ತೀರಬೇಕು, ಕಲಿಕೆಯಲ್ಲಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಹಿಂದೆ ಬಿದ್ದವರಿಗೂ ಕೂಡ ಗೌರವಿಸುವ ಕಾರ್ಯಗಳು ಆಗಬೇಕು, ಅವಾಗ ಮುಂದಿನ ವರ್ಷ ಆ ಮಕ್ಕಳು ಸ್ಪರ್ಧೆಗೆ ಬಿದ್ದು ಇನ್ನೂ ಹೆಚ್ಚು ಅಂಕಗಳನ್ನು ಗಳಿಸುತ್ತಾರೆ” ಎಂದು ತಿಳಿಸಿದರು. ಇನ್ನೊರ್ವ ಮುಖ್ಯ ಅತಿಥಿ ಹಿಮಾಲಯದ ತುತ್ತ ತುದಿಗೆ ಬೈಕನಲ್ಲಿ ಪ್ರಯಾಣಿಸಿ ಖ್ಯಾತಿ ಗಳಿಸಿದ ಮೂಲತಹ ಕುಂದಾಪುರದವರಾದ ವಿಲ್ಮಾ ಕರ್ವಾಲ್ಲೊ (ಕ್ರಾಸ್ತಾ) ಬೆಂಗಳೂರು ಅವರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಆರ್ಥಿಕವಾಗಿ ಹಿಂದುಳಿದು ಒದಿನಲ್ಲಿ ಸಾಧನೆ ಮಾಡಿದಕ್ಕಾಗಿ “ವಿಕ್ರಮ್ ಸುನೀತಾ” ಅವಾರ್ಡನನ್ನು ನೀಡಿ “ವಿದ್ಯಾರ್ಥಿಗಳಿಗೆ ತಮ್ಮ ವಿಧ್ಯಾಬಾಸದಲ್ಲಿ ಹಲವಾರು ಆಯ್ಕೆಗಳಿರುತವೆ, ಅದನ್ನು ನಿಮ್ಮ ಟೀಚರ್‌ಗಳು ಅಥವ ನಿಮ್ಮ ಹೆತ್ತವರು ನೀವು ಇಂತಹ ಒದನ್ನು ಆಯ್ಕೆ ಮಾಡಿಕೊಳ್ಳಿ ಅಂತಾ ಸಲಹೆ ಮಾಡುತ್ತಾರೆ ಆದರೆ ನಿಮ್ಮ ಆಯ್ಕೆಯೆ ಅಂತಿಮವಾಗಿರಬೇಕು ಅದು ನಿಮಗೆ ಸಹಕಾರಿಯಾಗುತ್ತೆ, ಸಾಧನೆ ಮಾಡಲು ಛಲವಿರಬೇಕು, ನಿಮ್ಮಿಂದ ಅಸಾಧ್ಯ ಎಂದು ಬೇರೆಯವರು ಹೇಳಿದರೆ, ಅದಕ್ಕೆ ಸೋತು ನಿರಾಶರಾಗಬೇಡಿ, ನನ್ನಿಂದ ಸಾಧ್ಯವೆಂದು ಪ್ರಯ್ತಿನಿಸಿ, ಕೊನೆಗೂ ಜಯ ನಿಮ್ಮದಾಗುತ್ತದೆ’ ಎಂದು ಕಿವಿ ಮಾತು ಹೇಳಿದರು. ಶೆವೊಟ್ ಪ್ರತಿಷ್ಟಾನ್ ಅಧಕ್ಷ ವಿನೋದ್ ಕ್ರಾಸ್ಟೊ ಮತ್ತು ಕಥೊಲಿಕ್ ಸಭಾದ ನಿಕಟಪೂರ್ವ ಅಧ್ಯಕ್ಷೆ ಮೇಬಲ್ ಡಿಸೋಜಾ ಬಹುಮಾನ ವಿತರಣೆ ಮಾಡಿದರು
ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿಯ ಅಧ್ಯಕ್ಷೆ, ಕಾರ್ಯಕ್ರಮದ ಅಧ್ಯಕ್ಷೆಯಾದ ಶಾಂತಿ ಪಿರೇರಾ “ನಮ್ಮ ವಿದ್ಯಾರ್ಥಿಗಳು ಸರಕಾರಿ ಉದ್ಯೋಗ ಪಡೆಯುವಲ್ಲಿ ಪ್ರಯತ್ನ ಪಡೆಯಬೇಕು, ಆ ನಿಟ್ಟಿನಲ್ಲಿ ವಿಧ್ಯಾಭಾಸವನ್ನು ಪಡೆಯಬೇಕು, ಸರಕಾರದ ಅತ್ಯುತ್ತಮ ಹುದ್ದೆಗಳನ್ನು ಪಡೆದುಕೊಳ್ಳಲು ಪ್ರಯತ್ನ ಮಾಡಬೇಕು” ಎಂದು ತಿಳಿಸಿದರು.
ಕನ್ನಡ ಕೊಂಕಣಿ ಭಾಷಣ ಸ್ಪರ್ಧೆಗಳಲ್ಲಿ ವೀಜೆತರಾದವರಿಗೆ, ಕಲಿಕೆಯಲ್ಲಿ ವಲಯ ಮಟ್ಟದಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ, ವಿಶೇಷ ಸಾಧನೆ ಮಾಡಿದವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಅತಿಥಿಗಳನ್ನು ಸನ್ಮಾನಿಸಲಾಯಿತು. ವ.ಕಥೊಲಿಕ್ ಸಭಾ ನಿಯೋಜಿತ ಅಧ್ಯಕ್ಷ ಕಾರ್ಯಕ್ರಮದ ಸಂಚಾಲಕ ವಿಲ್ಸನ್ ಡಿಆಲ್ಮೇಡಾ ಸ್ವಾಗತಿಸಿದರು. ಮಾಜಿ ಕಥೊಲಿಕ್ ವ.ಸಭಾ ಅಧ್ಯಕ್ಷೆ ಡಾ.ಸೋನಿ ಕಾರ್ಯಕ್ರಮ ನಿರೂಪಿಸಿದರು. ವ.ಕಥೊಲಿಕ್ ಸಭಾ ಕಾರ್ಯದರ್ಶಿ ಪ್ರೇಮಾ ಡಿಕುನ್ಹಾ ವಂದಿಸಿದರು.

Related Articles

Back to top button