ಸಾಮಾಜಿಕ
ಕುಂದಾಪುರ: ವರದಕ್ಷಿಣೆ ಕಿರುಕುಳ ಪತಿ ವಿರುದ್ಧ ದೂರು
Views: 281
ಕುಂದಾಪುರ: ವರದಕ್ಷಿಣೆ ವಿಚಾರವಾಗಿ ನನಗೆ ಹಾಗೂ ಪುತ್ರಿಗೆ ಹಿಂಸೆ ನೀಡಿರುವುದಾಗಿ ಕುಂದಾಪುರದ ನಿವಾಸಿ ಪತ್ನಿ ಅನುಷಾ (30) ಅವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ನೇಜಾರಿನ ನಿವಾಸಿ ಪತಿ ಕಿರಣ್ ಕುಮಾರ್ ಅವರು ವರದಕ್ಷಿಣೆ ವಿಚಾರವಾಗಿ ನನಗೆ ಹಾಗೂ ಪುತ್ರಿಗೆ ಹಿಂಸೆ ನೀಡಿದ್ದು, 2018ರಲ್ಲಿ ಕಿರಣ್ ಜೊತೆ ವಿವಾಹವಾಗಿದ್ದು 2020ರಲ್ಲಿ ಪತಿಯ ಹೆತ್ತವರಾದ ರವಿ ಹಾಗೂ ಕುಮುದಾಕ್ಷಿ ಅವರು ನಮ್ಮನ್ನು ಮನೆಯಿಂದ ಹೊರಹಾಕಿದ್ದಾರೆ. ಪ್ರಸ್ತುತ ಕೋಟೇಶ್ವರದಲ್ಲಿ ಪತಿಯೊಂದಿಗೆ ಬಾಡಿಗೆ ಮನೆಯಲ್ಲಿದ್ದೇವೆ. ಇಲ್ಲಿ ಪತಿಯು ಆನ್ಲೈನ್ ಜೂಜಾಟದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವುದಲ್ಲದೆ ಮಧ್ಯವ್ಯಸನಿಯಾಗಿದ್ದಾರೆ ಅಷ್ಟೇ ಅಲ್ಲದೆ ನನಗೆ ಹಾಗೂ ಮಗುವಿಗೆ ಕಿರುಕುಳ ನೀಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ