ಇತರೆ
ಕುಂದಾಪುರ: ಮರದ ಕೊಂಬೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ
Views: 121
ಕನ್ನಡ ಕರಾವಳಿ ಸುದ್ದಿ: ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಹೊಳೆ ಗ್ರಾಮದ ನಿವಾಸಿಯೊಬ್ಬರು ಗೇರು ಮರದ ಕೊಂಬೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ನಾಗು ಪೂಜಾರಿ (52) ರವರು ಕಳೆದ 30 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಅದಕ್ಕೆ ಕುಂದಾಪುರದ ಸತ್ಯಮಾನಸ ಮನೋ ವೈದ್ಯಕೀಯ ಸಲಹಾ ಕೇಂದ್ರದಲ್ಲಿ ಚಿಕಿತ್ಸೆಯನ್ನು ಕೊಡಿಸುತ್ತಿದ್ದು ಆದರೂ ಕೂಡಾ ಕಳೆದ ಒಂದು ವಾರದಿಂದ ನಾಗು ಪೂಜಾರಿರವರು ಮಂಕಾಗಿದ್ದರು. ಅಲ್ಲದೇ ಕಳೆದ 1 ತಿಂಗಳ ಹಿಂದೆ ನಾಗು ಪೂಜಾರಿ ರವರು ಬಲಕಾಲಿನ ಮದ್ಯದ ಗಂಟಿನಿಂದ ಮೇಲಕ್ಕೆ ಪೆಟ್ಟು ಮಾಡಿಕೊಂಡಿದ್ದರು. ಪೂಜಾರಿ ರವರು ಮನೆಯ ಹಿಂಬದಿ ಗೇರು ಮರದ ಕೊಂಬೆಗೆ ನೇಣು ಬಿಗಿದುಕೊಂಡಿರುವ ವಿಚಾರವನ್ನು ತಿಳಿಸಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.






