ಜನಮನ

ಕುಂದಾಪುರ, ಬೈಂದೂರು ತಾಲೂಕಿನಾದ್ಯಂತ ಇಂದು ಈ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯ

Views: 80

ಕನ್ನಡ ಕರಾವಳಿ ಸುದ್ದಿ: ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಕೋಡಿ ಮಾರ್ಗದಲ್ಲಿ ಜ.6 ರಂದು ಬೆಳಿಗ್ಗೆ 9ರಿಂದ ಸಂಜೆ 5.30ರ ವರೆಗೆ ಮಾರ್ಗ ನಿರ್ವಹಣಾ ಕಾಮಗಾರಿ, ವಾಹಕ ಬದಲಾವಣೆ ಮತ್ತು ಲಿಂಕ್‌ಲೈನ್ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಕೋಡಿ, ಹಂಗಳೂರು, ಅಂಕದಕಟ್ಟೆ ಗೋಪಾಡಿ ಮತ್ತು ಎಂ.ಕೋಡಿ ಗ್ರಾಮಗಳ ಸುತ್ತಮುತ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುತ್ತದೆ.

ನಾವುಂದ 110 ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಕಂಬದಕೋಣೆ, ಕಿರಿಮಂಜೇಶ್ವರ, ಹೇರೂರು ಮತ್ತು ಮರವಂತೆ ಹಾಗೂ 33 ಕೆ.ವಿ. ಬೈಂದೂರು ಮಾರ್ಗದಲ್ಲಿ ಜ.6ರಂದು ಬೆಳಗ್ಗೆ 9.30ರಿಂದ ಸಂಜೆ 5ರ ವರೆಗೆ ತುರ್ತು ನಿರ್ವಹಣ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಬೈಂದೂರು, ಶಿರೂರು, ಪಡುವರಿ, ಉಪ್ಪುಂದ, ಯಡ್ತರೆ, ಬಿಜೂರು, ತಗ್ಗರ್ಸೆ, ಗಂಗನಾಡು, ನಾಯ್ಕನಕಟ್ಟೆ ಕೆರ್ಗಾಲು, ಅರೆಶಿರೂರು, ಗೋಳಿಹೊಳೆ, ಕಂಬದಕೋಣೆ, ಕಿರಿಮಂಜೇಶ್ವರ, ಹೇರೂರು ಮತ್ತು ಮರವಂತೆ ಗ್ರಾಮಗಳ ಸುತ್ತಮುತ್ತ ವಿದ್ಯುತ್ ವ್ಯತ್ಯಯ ಮಾಡಲಾಗುತ್ತದೆ. ಹಿರಿಯಡಕ 110ಕೆ.ವಿ ನೋಡಲ್ ವ್ಯಾಪ್ತಿಯ 220 ಕೆ.ವಿ. ಸ್ವೀಕರಣ ಕೇಂದ್ರ ಹೆಗ್ಗುಂಜೆಯಲ್ಲಿ 110 ಕೆ.ವಿ. ಹೆಗ್ಗುಂಜೆ-ಹಿರಿಯಡಕ ಮಾರ್ಗದ ಬೇ ನಿರ್ವಹಣೆಯ ಕಾಮಗಾರಿ ಜ. 6ರಂದು ಬೆಳಗ್ಗೆ 8ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ. ಅಂದು 110/11 ಕೆ.ವಿ. ಉಪಕೇಂದ್ರಗಳಾದ ಮಧುವನ, ಕುಂದಾಪುರ ಮತ್ತು ನಾವುಂದಹಾಗೂಹಾಗೂ 33/11 ಕೆ.ವಿ. ಉಪಕೇಂದ್ರಗಳಾದ ತಲ್ಲೂರು, ಬೈಂದೂರು, ಕೊಲ್ಲೂರು, ಗಂಗೊಳ್ಳಿ ಮತ್ತು ಜಿ.ಐ.ಎಸ್. ಕೋಟಗಳಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರ್‌ಗಳ ಜತೆಗೆ 33 ಕೆ.ವಿ. ಕುಂದಾಪುರ-ಗಂಗೊಳ್ಳಿ ಮಾರ್ಗ, 33 ಕೆ.ವಿ. ಸೌಪರ್ಣಿಕಾ ಏತ ನೀರಾವರಿ ಸ್ಥಾವರ ಆಲೂರು, 33 ಕೆ.ವಿ. ಸೌಕೂರು ಏತ ನೀರಾವರಿ ವಿದ್ಯುತ್ ಮಾರ್ಗ ಹಾಗೂ ಮೆ। ಕೊಂಕಣ ರೈಲ್ವೇ ನಿಗಮ ನಿಯಮಿತದ 110 ಕೆ.ವಿ. ಸೇನಾಪುರ ಟಿಎಸ್‌ಎಸ್‌ಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಕುಂದಾಪುರ ಪುರಸಭೆ ವ್ಯಾಪ್ತಿಯ ಟಿ.ಟಿ. ರೋಡ್, ಬಿ.ಸಿ. ರೋಡ್, ಹಂಗಳೂರು, ಕುಂದಾಪುರ, ಕೋಟೇಶ್ವರ, ಜಪ್ತಿ, ಹೊಂಬಾಡಿ-ಮಂಡಾಡಿ, ಕಾಳಾವರ, ಮೊಳಹಳ್ಳಿ, ಅಂಪಾರು ಹಳ್ಳಾಡು, ಕಾವಾಡಿ, ಶಂಕರನಾರಾಯಣ, ಅಸೋಡು, ಯಡಾಡಿ-ಮತ್ಯಾಡಿ, ಬೀಜಾಡಿ, ಗೋಪಾಡಿ, ಕುಂಭಾಶಿ, ತೆಕ್ಕಟ್ಟೆ ಕೋಣಿ, ಕಂದಾವರ, ಬಸ್ರೂರು, ಬಳ್ಕೂರು ಆನಗಳ್ಳಿ ಕೋಡಿ, ಎಂ.ಕೋಡಿ ಮತ್ತು ಅಂಕದಕಟ್ಟೆ ತೂದಳ್ಳಿ ಹೇರಂಜಾಲು, ಬವಳಾಡಿ, ಹೇರೂರು, ಕಾಲ್ತೋಡು ಉಳ್ಳೂರು-11, ಆವರ್ಸೆ, ಆಲೂರು, ಹಕ್ಲಾಡಿ, ನಾಡ, ಹರ್ಕೂರು, ನೂಜಾಡಿ, ನಾವುಂದ, ಸೇನಾಪುರ, ಬಡಾಕೆರೆ, ಕುಂದಬಾರಂದಾಡಿ, ಹಡವು, ತ್ರಾಸಿ, ಹೊಸಾಡು, ಕೊಯಾನಗರ, ಜಡ್ಡಲ್, ಎಲ್ಲೂರು, ಬಾಳ್ಕೊಡ್ಡು ಹಾಲ್ಕಲ್, ದಳಿ, ಮಾವಿನಕಾರು, ಭಾವಡಿ, ಮೇಘನಿ, ಹಳ್ಳಿಬೇರು, ಜನ್ನಾಲ್ ಬೀಸಿನಪಾರೆ, ಸೆಗ್ಗೋಡು, ಕಾ ಮೆಕ್ಕೆ ಗೋಳಿಹೊಳೆ, ಮುದೂರು, ಅರೆಹೊಳೆ, ನಾಗೂರು, ಕರ್ಕುಂಜೆ, ಕೊಲ್ಲೂರು, ನಂದನವನ, ಯಳಜಿತ್, ಹೊಸೂರು, ಗಂಗನಾಡು, ವಂಡ್ರೆ ಚಿತ್ತೂರು, ಬೆಳ್ಳಾಲ, ಜಡ್ಕಲ್, ಆನಗಳ್ಳಿ ಉಪ್ಪಿನಕುದ್ರು, ಇಡೂರು-ಕುಂಜ್ಞಾಡಿ, ಮುದೂರು, ಹೊಸೂರು, ಕರ್ಕುಂಜೆ, ಕಾವಾಡಿ, ಅಂಪಾರು, ಕೆರಾಡಿ, ಆಜಿ, ಕೊಡ್ಲಾಡಿ, ಹೇರಿಕುದ್ರು, ಗುಲ್ವಾಡಿ, ಬಾಂಡ್ಯ, ತಲ್ಲೂರು, ಉಪ್ಪಿನಕುದ್ರು, ಹಟ್ಟಿಯಂಗಡಿ, ಕನ್ಯಾನ, ಕೆಂಚನೂರು, ನೇರಳಕಟ್ಟೆ ಹೆಮ್ಮಾಡಿ, ಕಟ್ ಬೆಲ್ಲೂರು, ದೇವಲ್ಕುಂದ, ಮುಳ್ಳಿಕಟ್ಟೆ ಗಂಗೊಳ್ಳಿ, ಗುಜ್ಜಾಡಿ, ಉಳ್ಳೂರು, ಕೆದೂರು, ಬೇಳೂರು, ಹಳ್ಳಾಡಿ-ಹರ್ಕಾಡಿ, ಹೆಸ್ಕತ್ತೂರು, ಕೊರ್ಗಿ ಗ್ರಾಮಗಳ ಸುತ್ತಮುತ್ತ ವಿದ್ಯುತ್ ವ್ಯತ್ಯಯ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Related Articles

Back to top button