ಇತರೆ
ಕುಂದಾಪುರ: ಪಂಚಗಂಗಾವಳಿ ನದಿಗೆ ಬಿದ್ದು ನಾಪತ್ತೆಯಾಗಿದ್ದ ಮೀನುಗಾರನ ಶವ ಪತ್ತೆ
Views: 0
ಕನ್ನಡ ಕರಾವಳಿ ಸುದ್ದಿ: ಕುಂಭಾಶಿ ಗ್ರಾಮದ ಕೊರವಡಿಯ ಪಡಿಯನ ಮನೆಯ ನಿವಾಸಿ ಶೀನ ಮರಕಾಲ ಅವರ ಪುತ್ರ ಸಂತೋಷ್ (38) ಪಂಚಗಂಗಾವಳಿ ನದಿಗೆ ಬೋಟಿನಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನಾಪತ್ತೆಯಾದ ಘಟನೆ ಜ.19ರ ಬೆಳಗಿನ ಜಾವ ಸಂಭವಿಸಿದ್ದು, ಅವರ ಮೃತದೇಹವು ಮಂಗಳವಾರ ಸಂಜೆ ಹೇರಿಕುದ್ರು ಸಮೀಪ ಪತ್ತೆಯಾಗಿದೆ.
ಸಂತೋಷ್ ಅವರು ಗಂಗೊಳ್ಳಿಯ ಗುರು ಜಟ್ಟಿಗೇಶ್ವರ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ಜ.19ರ ಬೆಳಗ್ಗೆ ಮೀನುಗಾರಿಕೆ ಮುಗಿಸಿ, ವಾಪಾಸು ಬಂದರಿಗೆ ಬರುವ ವೇಳೆ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು.ಕೂಡಲೇ ಬೋಟಿನಲ್ಲಿದ್ದವರೆಲ್ಲ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ.






