ಇತರೆ
ಕುಂದಾಪುರ: ಕೋಣಿ ಸಮೀಪ ಸ್ಕೂಟರ್ ಗಳು ಡಿಕ್ಕಿ, ಮೂವರು ಆಸ್ಪತ್ರೆಗೆ ದಾಖಲು
Views: 135
ಕನ್ನಡ ಕರಾವಳಿ ಸುದ್ದಿ: ಕೋಣಿ ಗ್ರಾಮದ ಕೋಣಿ ರಸ್ತೆಯ ಹೆಚ್‌ಎಂಟಿ ಕ್ರಾಸ್ ಬಳಿ ಸ್ಕೂಟರ್ ಗಳು ಢಿಕ್ಕಿಯಾಗಿ ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಭಾಸ್ಕರ ಶೆಟ್ಟಿ ಅವರು ಕುಂದಾಪುರ ಸಿದ್ದಾಪುರ ರಸ್ತೆಯಲ್ಲಿ ಸ್ಕೂಟರ್ ನಲ್ಲಿ ಹೋಗುತ್ತಿದ್ದಾ ಬಸ್ರೂರು ಕಡೆ ಹೋಗಲು ಮುಖ್ಯ ರಸ್ತೆ ಪ್ರವೇಶಿಸಿದಾಗ ಬಸ್ರೂರು ಕಡೆಯಿಂದ ಬಸ್ರೂರು ಮೂರುಕೈ ಕಡೆಗೆ ಬರುತ್ತಿದ್ದ ಸ್ಕೂಟರ್ ಢಿಕ್ಕಿ ಆಗಿದೆ. ಪರಿಣಾಮ ಸ್ಕೂಟರ್ ನಲ್ಲಿದ್ದ ಸವಾರ ಆಶ್ಲೇಷ ಮತ್ತು ಸಹ ಸವಾರೆ ಜಯಶ್ರೀ, ಇನ್ನೊಂದು ಸ್ಕೂಟರ್ ನಲ್ಲಿದ್ದ ಭಾಸ್ಕರ ಶೆಟ್ಟಿ ರಸ್ತೆಗೆ ಬಿದ್ದರು. ಮೂರು ಮಂದಿಗೆ ಗಾಯವಾಗಿದ್ದು ಅವರನ್ನು ಚಿಕಿತ್ಸೆಗೆ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






