ಇತರೆ

ಕುಂದಾಪುರ: ಕೋಟೇಶ್ವರದಲ್ಲಿ ಎರಡು ಮಕ್ಕಳ ತಾಯಿ ನಾಪತ್ತೆ

Views: 417

ಕನ್ನಡ ಕರಾವಳಿ ಸುದ್ದಿ:ಕೋಟೇಶ್ವರದಲ್ಲಿ ಎರಡು ಮಕ್ಕಳ ತಾಯಿ ನಾಪತ್ತೆಯಾದ ಬಗ್ಗೆ ವರದಿಯಾಗಿದೆ.

25 ದಿನಗಳ ಹಿಂದೆ ಉತ್ತರ ಪದೇಶದಿಂದ ಪತಿ ಇಬ್ಬರು ಮಕ್ಕಳೊಂದಿಗೆ ಬಂದು ಕೋಟೇಶ್ವರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಮಹಾದೇವ (32) ಅವರ ಪತ್ನಿ ಅಂಜಲಿ (28) ನಾಪತ್ತೆಯಾಗಿದ್ದಾರೆ.

ಇವರು ಕೋಟೇಶ್ವರದ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಬೆಳಿಗ್ಗೆ ಕೆಲಸಕ್ಕೆ ಹೋದಾಗ ಪತ್ನಿ ಅಂಜಲಿ ಅವರು 8 ವರ್ಷದ ಪುತ್ರಿ ಹಾಗೂ ನಾಲ್ಕರ ಹರೆಯದ ಪುತ್ರಿಯೊಂದಿಗೆ ಮನೆಯಲ್ಲಿಯೇ ಇದ್ದರು. ಆದರೆ ಮಹಾದೇವ ಅವರು ಫ್ಯಾಕ್ಟರಿಯಿಂದ ವಾಪಸ್ ಬಂದಾಗ ಪತ್ನಿ ಮನೆಯಲ್ಲಿ ಇರಲಿಲ್ಲ ಇಬ್ಬರು ಮಕ್ಕಳು ಮಾತ್ರ ಇದ್ದರು. ಅನಂತರ ಎಲ್ಲ ಕಡೆ ಹುಡುಕಾಟ ನಡೆಸಿದ್ದು ಊರು ಪತ್ನಿಯ ಮನೆಗೂ ಕರೆ ಮಾಡಿ ವಿಚಾರಿಸಿದರೂ, ಈವರೆಗೆ ಪತ್ತೆಯಾಗಿಲ್ಲ ಈ ಸಂಬಂಧ ಪತಿ ಮಹಾದೇವ ಬಾರಾಬನರೆ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!