ಇತರೆ

ಕುಂದಾಪುರ: ಕಾಳಾವರ ಮನೆಯಲ್ಲಿ ಮಲಗಿದಲ್ಲೇ ವ್ಯಕ್ತಿ ಸಾವು

Views: 284

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಕಾಳಾವರ ಗ್ರಾಮ ಪಂಚಾಯತ್ ಕಚೇರಿ ಬಳಿಯ ವ್ಯಕ್ತಿಯೊಬ್ಬರು ಮನೆಯಲ್ಲಿ ಮಲಗಿದಲ್ಲೇ ಮೃತಪಟ್ಟಿದ್ದಾರೆ.

ಹ್ಯಾರಿ ರಸ್ಕೀನಾ ಅವರ ಪುತ್ರ ಸುನೀಲ್ ರಸ್ಕೀನಾ  (49) ಮೃತಪಟ್ಟವರು.

ಸುನೀಲ್ ರಸ್ಕೀನಾ ಅವರಿಗೆ ಈ ಹಿಂದೆ ವಿಚ್ಚೇದನವಾಗಿದ್ದು, ಸುನಿಲ್ ವಾಸವಿರುವ ಮನೆಯಿಂದ ವಿಪರೀತ ವಾಸನೆ ಬರುತ್ತಿದ್ದುದನ್ನು ಪಕ್ಕದ ಮನೆಯವರು ಗಮನಿಸಿ ಮಾಹಿತಿ ನೀಡಿದ್ದು, ಪೊಲೀಸರು ಬಂದು ಮನೆಯ ಬಾಗಿಲು ತೆಗೆದು ನೋಡಿದಾಗ ಹಾಸಿಗೆಯ ಮೇಲೆ ಮಲಗಿದ ಸ್ಥಿತಿಯಲ್ಲಿ ಅವರು ಮೃತಪಟ್ಟಿದ್ದರು.ವಾರದ ಹಿಂದೆ ಮೃತಪಟ್ಟಿರಬಹುದು ಎಂದು ತಿಳಿಯಲಾಗಿದೆ.

ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!