ಕುಂದಾಪುರ: ಅಮಾಸೆಬೈಲಿನಲ್ಲಿ ಹಾಡಹಗಲೇ ಮನೆಯಿಂದ 5.15 ಲಕ್ಷ ರೂ. ಚಿನ್ನಾಭರಣ – ನಗದು ಕಳವು
Views: 138
ಕನ್ನಡ ಕರಾವಳಿ ಸುದ್ದಿ: ಅಮಾಸೆಬೈಲು ಮಚ್ಚಟ್ಟು ಗ್ರಾಮದ ಆಯಿಮುಳ್ಳು ಗುಲಾಬಿ ಬೋವಿ (60) ಅವರ ಮನೆಯಲ್ಲಿ ಜ. 21ರಂದು ಹಾಡಹಗಲೇ ಕಳ್ಳತನ ನಡೆದಿದೆ.
ಗುಲಾಬಿ ಅವರು ಎಂದಿನಂತೆ ಬಾಗಿಲು ಹಾಕಿ ಸ್ಥಳೀಯರೊಬ್ಬರ ಮನೆಗೆ ಕೆಲಸಕ್ಕೆ ತೆರಳಿದ್ದರು. ಸಂಜೆ ಹಿಂದಿರುಗಿದಾಗ ಬಾಗಿಲಿನ ಹಲಗೆ ಒಳಗೆ ಮುರಿದಿತ್ತು. ಹೋಗಿ ನೋಡಿದಾಗ ಕಪಾಟನ್ನು ಮುರಿದು ಚಿನ್ನಾಭರಣ ಮತ್ತು ನಗದನ್ನು ಕಳ್ಳತನ ಮಾಡಿರುವುದು ಕಂಡುಬಂದಿತ್ತು.
3 ತಾಳಿ ಇರುವ ಅಂದಾಜು 4 ಪಾವನ್ ತೂಕ ಇರುವ ದೊಡ್ಡ ಚಿನ್ನದ ಕರಿಮಣಿ ಸರ -1, 1 ಪಾವನ್ ತೂಕ ಇರುವ ಚಿನ್ನದ ಚೈನ್ -1, ತಲಾ 3/4 ಪಾವನ್ ರಂತೆ ಒಟ್ಟು 1 ½ ಪಾವನ್ ತೂಕ ಇರುವ ಚಿನ್ನದ ಬಳೆಗಳು -2, 3 ಚಿನ್ನದ ಉಂಗುರ ಸೇರಿ 1 ¾ ಪಾವನ್ ಅದರಲ್ಲಿ 3/4 ಪಾವನ್ ತೂಕ ಇರುವ ಚಿನ್ನದ ಉಂಗುರ -1, ತಲಾ 1/2 ಪಾವನ್ ತೂಕ ಇರುವ ಚಿನ್ನದ ಉಂಗುರ -2 , 3/4 ಪಾವನ್ ಒಟ್ಟು ತೂಕ ಇರುವ ಚಿನ್ನದ ಗುಂಡು -2, 3/4 ಪಾವನ್ ಒಟ್ಟು ತೂಕ ಇರುವ ಚಿನ್ನದ ಜುಮ್ಕಿ -2 ಒಟ್ಟು ಸುಮಾರು 80 ಗ್ರಾಂ ತೂಕ ಇರುವ ಚಿನ್ನದ ಆಭರಣಗಳು ಮತ್ತು ಕಪಾಟಿನಲ್ಲಿದ್ದ ಹಣ ಸುಮಾರು 90,000/- ರೂಪಾಯಿಗಳನ್ನು ಒಟ್ಟು ಮೌಲ್ಯ 5 ಲಕ್ಷ 15 ಸಾವಿರ ಮೌಲ್ಯದ ನಗದು ಮತ್ತು ಆಭರಣ ಕಳವಾಗಿವೆ ಎಂದು ಗುಲಾಬಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






