ಇತರೆ

ಕುಂದಾಪುರ:ಸೌದಿ ಅರೇಬಿಯಾದಲ್ಲಿ ಕಾರು ಅಪಘಾತ: ಕೋಟೇಶ್ವರದ ಯುವಕ ಸಾವು

Views: 427

ಕನ್ನಡ ಕರಾವಳಿ ಸುದ್ದಿ:  ಸೌದಿ ಅರೇಬಿಯಾದಲ್ಲಿ ಮಂಗಳವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕುಂದಾಪುರ ಮೂಲದ ಯುವಕ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.

ನಜ್ರಾನ್ ಅಭಾ ಹೆದ್ದಾರಿಯಲ್ಲಿ ಎರಡು ಕಾರುಗಳ ನಡುವೆ ಸಂಭವಿಸಿದ ಮುಖಾಮುಖಿಯಲ್ಲಿ ಒಂದು ಕಾರಿನಲ್ಲಿದ್ದ ಕುಂದಾಪುರ ಸಮೀಪದ ಕೋಟೇಶ್ವರ ಮೆಜಸ್ಟಿಕ್ ಹಾಲ್‌ನ ಪಾಲುದಾರ ಇರ್ಷಾದ್ ಅವರ ಏಕೈಕ ಪುತ್ರ ಅಮ್ಮಾರ್ ಅಹಮ್ಮದ್ ಶೇಖ್ (25) ಹಾಗೂ ಕೇರಳ ಮೂಲದ ಇನ್ನೊಬ್ಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಕಾರಿನಲ್ಲಿದ್ದ ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ.

ಸೌದಿ ಅರೇಬಿಯಾದ ಸೆಂಟರ್ ಪಾಯಿಂಟ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಈ ನಾಲ್ವರು ಕೆಲಸದ ನಿಮಿತ್ತ ಅಭಾಕ್ಕೆ ಪ್ರಯಾಣಿಸುತ್ತಿದ್ದರು. ಸೌದಿ ಪ್ರಜೆಯ ಕಾರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಮೃತರ ಸಂಬಂಧಿಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಅಫಘಾತ ನಡೆದ ಸ್ಥಳಕ್ಕೆ ತೆರಳಿದ್ದು, ಮೃತದೇಹವನ್ನು ಸ್ಥಳೀಯ ಆಸ್ಪತ್ರೆಯ ಶೈತ್ಯಾಗಾರದಲ್ಲಿಡಲಾಗಿದೆ.ಹಾಗೂ ಮೃತರ ಕುಟುಂಬವನ್ನು ಗಾಯಾಳು ಸೌದಿಅರೇಬಿಯಾ ಸರಕಾರ ಸಂಪರ್ಕಿಸಿದ್ದು, ಮುಂದಿನ ಕ್ರಮಕ್ಕೆ ಅನುವು ಮಾಡಿಕೊಟ್ಟಿದೆ.

 

Related Articles

Back to top button
error: Content is protected !!