ಜನಮನ
ಕುಂದಾಪುರ:ನಕಲಿ ದಸ್ತಾವೇಜು ತಯಾರಿಸಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೊಂದಾವಣೆ: ಆಸ್ತಿ ಕಬಳಿಕೆ ವಿರುದ್ಧ ದೂರು

Views: 781
ಕುಂದಾಪುರ: ಆಸ್ತಿ ಕಬಳಿಕೆಗೆ ನಕಲಿ ದಸ್ತಾವೇಜನ್ನು ತಯಾರಿಸಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೊಂದಾಯಿಸಿ ಮೋಸ ಮಾಡಿದ್ದಾಗಿ ಪ್ರಕರಣ ದಾಖಲಾಗಿದೆ.
ಸಣ್ಣಮ್ಮ ಎನ್ನುವರು ಅವರು 2020ರಲ್ಲಿ ಮೃತಪಟ್ಟಿದ್ದು, ಅವರ ಆಸ್ತಿ ಕಬಳಿಕೆಗೆ ನಕಲಿ ದಾಖಲೆ ಮಾಡಲಾಗಿದೆ ಎಂದು ದೂರು ದಾಖಲಾಗಿದೆ.
ಆಪಾದಿತರಾದ ದಾರು, ಶೇಖರ, ಮಹೇಶ ಅವರು ಮೃತರ ಆಸ್ತಿ ಕಬಳಿಸುವ ಉದ್ದೇಶದಿಂದ ಜಲಜಾ ಅವರ ತಾಯಿ ಹಾಗೂ ದೊಡ್ಡಮ್ಮನಾದ ಸಣ್ಣಮ್ಮ, ದಾರು ಅವರ ಜಂಟಿ ಹೆಸರಿನಲ್ಲಿರುವ ಕೋಟ- ಮಣೂರು ಗ್ರಾಮದ ಜಾಗಕ್ಕೆ ಸಂಬಂಧಿಸಿ ಮೃತ ಸಣ್ಣಮ್ಮ, ದಾರು ಅವರಿಗೆ ಜನರಲ್ ಪವರ್ ಆಫ್ ಅಟಾರ್ನಿ ಬರೆದುಕೊಟ್ಟಿದ್ದಾಗಿ, ಅದನ್ನು ಕುಂದಾಪುರದ ನೋಟರಿ ವಕೀಲರು ದೃಢೀಕರಿಸಿ, ಇನ್ನೊಬ್ಬ ವಕೀಲರು ಗುರುತಿಸಿದ್ದಾಗಿ ನಕಲಿ ದಸ್ತಾವೇಜನ್ನು ತಯಾರಿಸಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೊಂದಾಯಿಸಿ ಮೋಸ ಮಾಡಿದ್ದಾಗಿ ಪ್ರಕರಣ ದಾಖಲಾಗಿದೆ.






