ಕಿಡ್ನಿ ದಾನ ಮಾಡಿದರೆ 30 ಲಕ್ಷ ರೂ. ನೀಡುವುದಾಗಿ ಜಾಹೀರಾತು ನಂಬಿ ಮೋಸ ಹೋದ ಆಟೋ ಡ್ರೈವರ್ !

Views: 104
ವಿಜಯವಾಡ: ಗುಂಟೂರಿನಲ್ಲಿ ಮಧುಬಾಬು (31) ಆಟೋ ಡ್ರೈವರ್ ಆಗಿ ಕೆಲಸ ಮಾಡಿಕೊಂಡು ಇದ್ದವನಿಗೆ ಹಣಕಾಸಿನ ಸಮಸ್ಯೆ ಇತ್ತು. ಇದರ ಮಧ್ಯೆ ಸಾಲದ ಹೊರೆ ಬೇರೆ ಇತ್ತು. ಲೋನ್ ಆ್ಯಪ್ಗಳ ಸಾಲದ ಸುಳಿಗೆ ಸಿಲುಕಿದ್ದ ಆಟೋ ಡ್ರೈವರ್ಗೆ ನಯವಂಚಕರಿಂದ ಮೋಸ ಹೋಗಿದ್ದಾರೆ.
ಮಧುಬಾಬು ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿರುವಾಗ ಒಂದು ದಿನ ಫೇಸ್ಬುಕ್ನಲ್ಲಿ ಜಾಹೀರಾತು ನೋಡಿದ್ದಾನೆ. ಅದರಲ್ಲಿ ಕಿಡ್ನಿ ದಾನ ಮಾಡಿದರೆ 30 ಲಕ್ಷ ರೂ. ನೀಡುವುದಾಗಿ ಜಾಹೀರಾತು ಕೊಟ್ಟಿದ್ದರು. ಆ ಜಾಹೀರಾತು ನಂಬಿದ ಮಧುಬಾಬು ಅದರಲ್ಲಿರುವ ಫೋನ್ ನಂಬರಿಗೆ ಕರೆ ಮಾಡಿದ್ದಾನೆ.
ಫೋನ್ ಸ್ವೀಕರಿಸಿದ ಅಪರಿಚಿತರು ಮತ್ತೊಬ್ಬ ಮಧ್ಯವರ್ತಿಯ ನಂಬರ್ ಕೊಟ್ಟಿದ್ದಾನೆ. ಅವನು ಮಧುಬಾಬು ಅವರನ್ನು ವಿಜಯವಾಡದ ವಿಜಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬರುವಂತೆ ಹೇಳಿದ್ದಾನೆ. ಅಲ್ಲಿ ಕಿಡ್ನಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಎಡಗಡೆಯ ಕಿಡ್ನಿ ತೆಗೆದುಕೊಳ್ಳುತ್ತೇವೆ ಎಂದವರು ಆಪರೇಷನ್ ಥಿಯೇಟರ್ನಲ್ಲಿ ಬಲಗಡೆಯ ಕಿಡ್ನಿ ಎಗರಿಸಿಬಿಟ್ಟಿದ್ದಾರೆ.
ಮಧುಬಾಬು ಕಿಡ್ನಿ ದಾನ ಮಾಡಿದರೂ ಹೇಳಿದಂತೆ 30 ಲಕ್ಷ ರೂಪಾಯಿ ಹಣವನ್ನು ಕೊಟ್ಟಿಲ್ಲ. ಕಿಡ್ನಿ ನೀಡೋದಕ್ಕೆ ಮೊದಲು ಆಮೇಲೆ ಓಡಾಟಕ್ಕೆ ಅಂತ ಬರೀ 50 ಸಾವಿರ ರೂಪಾಯಿ ಖರ್ಚು ಮಾಡಿದ್ದಾರಂತೆ. ಕಿಡ್ನಿ ಸ್ವೀಕರಿಸಿದ ವ್ಯಕ್ತಿಗೂ ಆಟೋ ಡ್ರೈವರ್ ಮಧುಬಾಬುಗೂ ಯಾವುದೇ ರಕ್ತ ಸಂಬಂಧ ಇಲ್ಲ. ಆದರೆ ರಕ್ತ ಸಂಬಂಧ ಇರುವಂತೆ ದಾಖಲೆ ಸೃಷ್ಟಿಸಿ ಕಿಡ್ನಿ ಪಡೆದಿದ್ದಾರೆ. ಕಿಡ್ನಿ ಪಡೆದ ಬಳಿಕ ಭರವಸೆ ನೀಡಿದಂತೆ 30 ಲಕ್ಷ ರೂಪಾಯಿ ನೀಡಲಿಲ್ಲ ಎಂದು ಮಧು ಬಾಬು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.






