ಕಾಳಾವರ ಸಮಾಜ ಮಂದಿರದಲ್ಲಿ ಡಾl ಬಿ.ಆರ್. ಅಂಬೇಡ್ಕರ್ 134ನೇ ಜಯಂತಿ ಆಚರಣೆ

Views: 122
ಕನ್ನಡ ಕರಾವಳಿ ಸುದ್ದಿ: ಡಾl ಬಿ.ಆರ್. ಅಂಬೇಡ್ಕರ್ ಅವರ 134 ನೇ ಜನ್ಮ ದಿನಾಚರಣೆಯನ್ನು ಡಾl ಬಿ.ಆರ್. ಅಂಬೇಡ್ಕರ್ ಆದಿದ್ರಾವಿಡ ಸೇವಾ ಸಮಿತಿ ಕಾಳಾವರ ಇವರು ಕಾಳಾವರ ಜನತಾ ಕಾಲೋನಿಯ ಸಮಾಜ ಮಂದಿರದಲ್ಲಿ ಆಚರಿಸಲಾಯಿತು.
ಕಾಳಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪಾರ್ವತಿ ಸೇರೇಗಾರ್ ಅಧ್ಯಕ್ಷತೆ ವಹಿಸಿದ್ದರು. ಬಿ.ಆರ್. ಅಂಬೇಡ್ಕರ್ ಆದಿದ್ರಾವಿಡ ಸೇವಾ ಸಮಿತಿಯ ಉಪಾಧ್ಯಕ್ಷ ರಘುವೀರ ಕೆ.ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮುಖ್ಯ ಅತಿಥಿಯಾಗಿ ಕಾಳಾವರ ಗ್ರಾಮ ಪಂಚಾಯಿತಿ ಹಿರಿಯ ಸದಸ್ಯ ರಾಮಚಂದ್ರ ನಾವುಡ ಅವರು ಮಾತನಾಡಿ, ಅಂಬೇಡ್ಕರ್ ರವರನ್ನು ಹಾಡಿ ಹೊಗಳುವುದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ ಅವರ ಆದರ್ಶಗಳನ್ನು ಪಾಲಿಸುವುದರಿಂದ ಮಾತ್ರ ನಿಜವಾದ ಏಳಿಗೆ ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಸಮಾಜ ಮಂದಿರದ ದುರಸ್ತಿ ಕಾರ್ಯವನ್ನು ಅಚ್ಚು ಕಟ್ಟಾಗಿ ಮಾಡಿಕೊಟ್ಟ ಪಿ.ಡಬ್ಲ್ಯೂ.ಡಿ ಗುತ್ತಿಗೆದಾರ ಮಹೇಶ್ ಕಾಳಾವರ ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಗ್ರಾಮ ಪಂಚಾಯತಿ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾದ ಭಾರತಿ ವಕ್ವಾಡಿ, ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರ ಪೂಜಾರಿ, ಜಯಪ್ರಕಾಶ್ ಶೆಟ್ಟಿ, ರವಿರಾಜ ಶೆಟ್ಟಿ, ಸುಪ್ರಿಯಾ, ರಘುರಾಮ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜು ಬಿಲ್ಲವ ಉಪಸ್ಥಿತರಿದ್ದರು.
ಸಮಿತಿಯ ಅಧ್ಯಕ್ಷ ಸಂಜೀವ ಎಂ.ಪಿ ಸಮಾಜ ಮಂದಿರದ ದುರಸ್ತಿಗೆ ಸಹಾಯ ಮಾಡಿದ ಗ್ರಾಮ ಪಂಚಾಯತಿ ಆಡಳಿತ ವ್ಯವಸ್ಥೆ, ಮತ್ತು ತಾಲೂಕು ಪಂಚಾಯತ್ ಕುಂದಾಪುರ ಅವರಿಗೆ ಧನ್ಯವಾದ ಸಮರ್ಪಿಸಿದರು. ಮೋಹನ್ ಚಂದ್ರ ಕಾಳಾವರ್ ಕಾರ್ ಸ್ವಾಗತಿಸಿದರು. ವಿಜೇಂದ್ರ ಎಂ. ವಂದಿಸಿದರು.