ಸಾಮಾಜಿಕ

ಕಾರ್ಕಳ: ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ, ಸಂತ್ರಸ್ತೆ ಮಹಿಳೆ ರಕ್ಷಣೆ 

Views: 282

ಕಾರ್ಕಳ: ಮನೆಯಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಓರ್ವನನ್ನು ಕಾರ್ಕಳ ಪೊಲೀಸರು ಬಂಧಿಸಿ, ಸಂತ್ರಸ್ತೆಯ ಮಹಿಳೆಯನ್ನು ರಕ್ಷಿಸಲಾಗಿದೆ‌

ಕಾರ್ಕಳ ನಗರ ಠಾಣೆಗೆ  ದೊರೆತ ಮಾಹಿತಿಯಂತೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಅವಿನಾಶ್‌ ಕಂಪೌಂಡ್‌ ಬಳಿ ಇರುವ ಪ್ರಮಿಳಾ ವಿಜಯ್‌ ಕುಮಾರ್‌ ಎಂಬ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಸ್ಥಳಕ್ಕೆ ದಾಳಿ ನಡೆಸಿ ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಮನೆಯಲ್ಲಿ ಇದ್ದ ಭರತ್‌ ಎಂಬಾತನನ್ನು ದಸ್ತಗಿರಿ ಮಾಡಿ ಕೃತ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನು ಸ್ವಾಧೀನಪಡಿಸಿ ಕೊಂಡಿದ್ದಾರೆ

ಓರ್ವ ಸಂತ್ರಸ್ತ ಮಹಿಳೆಯನ್ನು ರಕ್ಷಿಸಿದ್ದು, ಆಪಾದಿತರಾದ ಭರತ್‌ ಕುಮಾರ್‌, ಮನೆಯ ಮಾಲೀಕರಾದ ಪ್ರಮೀಳಾ ವಿಜಯ್‌ ಕುಮಾರ್‌ ಇವರುಗಳು ಸೇರಿ ಮಹಿಳೆಯರನ್ನು ಸೇರಿಸಿಕೊಂಡು ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಿ ಅಕ್ರಮ ಲಾಭ ಪಡೆದ ಆರೋಪದ ಕುರಿತು ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related Articles

Back to top button
error: Content is protected !!