ಇತರೆ
ಐಸ್ ಕ್ರೀಂನಲ್ಲಿ ಪತ್ತೆಯಾಯಿತು ವಿಷಕಾರಿ ಹಾವು!

Views: 322
ಕನ್ನಡ ಕರಾವಳಿ ಸುದ್ದಿ: ವ್ಯಕ್ತಿಯೊಬ್ಬನಿಗೆ ಐಸ್ ಕ್ರೀಂನಲ್ಲಿ ಸತ್ತ ಹಾವೊಂದು ಸಿಕ್ಕಿದ್ದು.ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರು ಬೆಚ್ಚಿಬಿದ್ದಿದಾರೆ.
ಈ ವ್ಯಕ್ತಿ ತನ್ನ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಐಸ್ ಕ್ರೀಂ ಪೋಟೊವನ್ನು ಹಂಚಿಕೊಂಡಿದ್ದಾನೆ. ಥೈಲ್ಯಾಂಡ್‍ನ ಮುಯಾಂಗ್ ರಾಚಬುರಿ ಪ್ರದೇಶದ ವ್ಯಕ್ತಿಯೊಬ್ಬ ತಿನ್ನಬೇಕೆಂದು ಬ್ಲ್ಯಾಕ್ ಬೀನ್ ಐಸ್ ಕ್ರೀಮ್ ಬಾರ್ ತಂದಿದ್ದಾನೆ. ಆಗ ಅದರಲ್ಲಿ ಸತ್ತ ಹಾವೊಂದನ್ನು ಕಂಡು ಶಾಕ್ ಆಗಿದ್ದಾನೆ. ಐಸ್ ಕ್ರೀಮ್ ಒಳಗೆ ಸತ್ತ ಹಾವನ್ನು ಕಂಡ ಆತ ಅದನ್ನು ಬಿಸಾಡದೇ ಅದರ ಪೋಟೊ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ.
ಐಸ್ ಕ್ರೀಮ್ ಬಾರ್ ಒಳಗೆ ಸತ್ತ ಈ ಕಪ್ಪು ಮತ್ತು ಹಳದಿ ಬಣ್ಣದ ಹಾವು ಗೋಲ್ಡನ್ ಟ್ರೀ ಸ್ನೇಕ್ ಮರಿಯಂತೆ. ಈ ಪೋಸ್ಟ್ ಬಗ್ಗೆ ಕೆಲವರು ತಮಾಷೆ ಮಾಡಿದರೆ ಇನ್ನು ಕೆಲವರು ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ.