ಏಪ್ರಿಲ್-ಮೇ ನಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ..?
Views: 138
ಕನ್ನಡ ಕರಾವಳಿ ಸುದ್ದಿ,: ಏಪ್ರಿಲ್, ಮೇ ನಲ್ಲಿ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತ್ ಚುನಾವಣೆ ನಡೆಯುವ ಸಾಧ್ಯತೆಗಳಿದ್ದು, ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲು ಚರ್ಚೆ ನಡೆಯುತ್ತಿದೆ ಎಂದು ರಾಜ್ಯ ಚುನಾವಣೆ ಆಯುಕ್ತ ಜಿ ಎಸ್ ಸಂಗ್ರೇಶಿ ಅವರು ಮಾಹಿತಿ ನೀಡಿದರು.
ಬೆಳಗಾವಿಯ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಸಿದ್ಧತೆ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿಗಳ ಜೊತೆ ಸಭೆ ಮಾಡಿದ್ದೇವೆ. ಮತದಾರ ಪಟ್ಟಿ ಸಿದ್ದಪಡಿಸಬೇಕು.18 ವರ್ಷ ತುಂಬಿದ ಎಲ್ಲಾ ಯುವಕ, ಯುವತಿಯರನ್ನು ಈ ಪಟ್ಟಿಗೆ ಸೇರಿಸಬೇಕು. ಈ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಲಾಗಿದೆ. ಎಪ್ರಿಲ್, ಮೇ ನಲ್ಲಿ ಜಿಪಂ, ತಾಪಂ ಚುನಾವಣೆ ಮಾಡಬೇಕಿದೆ. ಮೀಸಲಾತಿ ಕಾರ್ಯಸೂಚಿ ಸಂಬಂಧಪಟ್ಟ ಪಂಚಾಯತ್ ಇಲಾಖೆ ಕೊಡುವುದು ಬಾಕಿ ಇದೆ. ಈ ಮಾಹಿತಿ ಬಂದ ತಕ್ಷಣವೇ ದಿನಾಂಕ ನಿಗದಿ ಮಾಡ್ತಿವಿ. ಎಪ್ರಿಲ್,ಮೇ ನಲ್ಲಿ ಚುನಾವಣೆ ಮಾಡೋದಕ್ಕೆ ಸರ್ಕಾರ ಕೂಡಾ ಸ್ಪಂದಿಸಿದೆ ಎಂದರು.