ಸಾಂಸ್ಕೃತಿಕ

ಆ್ಯಂಕ‌ರ್ ಅನುಶ್ರೀ ಮದುವೆ ಫಿಕ್ಸ್..!

Views: 346

ಕನ್ನಡ ಕರಾವಳಿ ಸುದ್ದಿ:ಕನ್ನಡ ಭಾಷೆಯಲ್ಲಿ ಆ್ಯಂಕ‌ರ್ ಅನುಶ್ರೀ ಅವರು ಜೀ ಕನ್ನಡ ವಾಹಿನಿಯ ಮೂಲಕ ನಿರೂಪಣೆ ಮಾಡುತ್ತಾ ರಿಯಾಲಿಟಿ ಶೋಗಳಿಗೆ ಹೊಸ ಗತ್ತು ಕೊಟ್ಟಿದ್ದರು. ಆ್ಯಂಕ‌ರ್ ಅನುಶ್ರೀ ಅವರು ಜೀ ಕನ್ನಡ ವಾಹಿನಿಯಲ್ಲಿ ಸುಮಾರು 15 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದು, 7 ಕೋಟಿ ಕನ್ನಡಿಗರ ಮನಸ್ಸನ್ನು ಆಕ್ರಮಿಸಿ ಮನೆ ಮಗಳೇ ಆಗಿ ಹೋಗಿದ್ದಾರೆ. ಇಂತಿಪ್ಪ ಆ್ಯಂಕ‌ರ್ ಅನುಶ್ರೀ ಅವರ ಮದುವೆ ಯಾವಾಗ? ಆ್ಯಂಕ‌ರ್ ಅನುಶ್ರೀ ಮದುವೆ ಆಗೋದೆ ಇಲ್ವಾ? ಅನ್ನೋ ಚರ್ಚೆಗಳೂ ಭಾರಿ ದೊಡ್ಡ ಮಟ್ಟದಲ್ಲಿ ನಡೆಯುವಾಗಲೇ ಆ್ಯಂಕ‌ರ್ ಅನುಶ್ರೀ ಅಭಿಮಾನಿಗಳು ಬಾಯಿ ತುಂಬಾ ಮೈಸೂರ್ ಪಾಕ್ ತಿನ್ನುವ ಸುದ್ದಿ ಇದೀಗ ಸಿಕ್ಕಿದೆ!

ಆ್ಯಂಕ‌ರ್ ಅನುಶ್ರೀ ಅವರು ಮದುವೆ ಆಗಬೇಕು ಅನ್ನೋದು ಕೋಟಿ ಕೋಟಿ ಜನರ ಬಯಕೆ. ಯಾಕಂದ್ರೆ ಆ್ಯಂಕ‌ರ್ ಅನುಶ್ರೀ ಅವರಿಗೆ ಮದುವೆ ವಯಸ್ಸು ಆಗಿದ್ದು, ಆದಷ್ಟು ಬೇಗ ಅವರು ಸಾಂಸಾರಿಕ ಜೀವನಕ್ಕೆ ಎಂಟ್ರಿ ಆಗಲಿ ಅಂತಾ ಹಾರೈಸುತ್ತಿದ್ದಾರೆ ಅಭಿಮಾನಿಗಳು. ಅದರಲ್ಲೂ ಈ ದೊಡ್ಡ ಮಟ್ಟಿಗೆ ಯಶಸ್ಸು ಕಂಡಿರುವ ಆ್ಯಂಕ‌ರ್ ಅನುಶ್ರೀ ಅವರು ಮದುವೆ ಆಗಿ ಇನ್ನಷ್ಟು ಖುಷಿ ಖುಷಿಯಾಗಿ ಇರಲಿ ಅನ್ನೋದೆ ಎಲ್ಲರ ಬಯಕೆ ಆಗಿದೆ. ಹೀಗಿದ್ದಾಗಲೇ, ಆ್ಯಂಕ‌ರ್ ಅನುಶ್ರೀ ಅಭಿಮಾನಿಗಳೇ ಇಲ್ಲಿ ಕೇಳಿ, ಆಗಸ್ಟ್ 2025 ಒಳಗೆ ಆ್ಯಂಕ‌ರ್ ಅನುಶ್ರೀ ಮದುವೆ ಫಿಕ್ಸ್?

ಕನ್ನಡಿಗರ ಪ್ರೀತಿಯ ರಿಯಾಲಿಟಿ ಶೋಗಳ ಪೈಕಿ ಜೀ ಕನ್ನಡ ವಾಹಿನಿಯ ಸರಿಗಮಪ, ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಹಾಗೂ ಡ್ರಾಮ ಜೂನಿಯರ್ಸ್ ಮೂಲಕ ಆ್ಯಂಕ‌ರ್ ಅನುಶ್ರೀ ಅವರು ಭಾರಿ ಭರ್ಜರಿ ದೊಡ್ಡ ಹೆಸರನ್ನು ಕೂಡ ಸಂಪಾದನೆ ಮಾಡಿದ್ದರು. ಅಲ್ಲದೆ ಕೋಟಿ ಕೋಟಿ ರೂಪಾಯಿ ಆಸ್ತಿ ಕೂಡ ಮಾಡಿದ್ದಾರೆ ಆಂಕರ್ ಅನುಶ್ರೀ ಅವರು ಅನ್ನೋ ಮಾತು ಇದ್ದರೂ ಆಸ್ತಿ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಇಲ್ಲ. ಹೀಗಿದ್ದಾಗಲೇ, ಆ್ಯಂಕ‌ರ್ ಅನುಶ್ರೀ ಮದುವೆ ಫಿಕ್ಸ್, ಅಗಸ್ಟ್ 25ರೊಳಗೆ  ಸಪ್ತಪದಿ ತುಳಿಯುತ್ತಾರಾ…?

Related Articles

Back to top button
error: Content is protected !!