ಧಾರ್ಮಿಕ
ಆನೆಗುಡ್ಡೆ ಶ್ರೀ ವಿನಾಯಕ ದೇವರ ಸನ್ನಿಧಿಯಲ್ಲಿ 5 ಸಾವಿರ ತೆಂಗಿನ ಕಾಯಿ ಮೂಡು ಗಣಪತಿ ಸೇವೆ

Views: 36
ಕುಂದಾಪುರ: ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಡಿ.25 ರಂದು ಐಟಿ ಉದ್ಯಮಿ ಮಣೂರು ನಿವಾಸಿ, ಅಮೇರಿಕದಲ್ಲಿ ನೆಲೆಸಿರುವ ಅವರ ಪುತ್ರಿ ಸ್ಪಂದನ ಜಯರಾಮ್ ಶೆಟ್ಟಿ ಅವರ ಸೇವೆಯಾಗಿ 5 ಸಾವಿರ ತೆಂಗಿನ ಕಾಯಿ ಮೂಡು ಗಣಪತಿ ಸೇವೆ ನಡೆಯಿತು.
ಅನುವಂಶಿಕ ಆಡಳಿತ ಧರ್ಮದರ್ಶಿ ಶ್ರೀ ಕೆ.ರಮಣ ಉಪಾಧ್ಯಾಯ, ವಿಶ್ರಾಂತ ಆಡಳಿತ ಧರ್ಮದರ್ಶಿ. ಶ್ರೀ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಪರ್ಯಾಯ ಅರ್ಚಕ ಶ್ರೀ ಕೆ.ಶ್ರೀಶ ಉಪಾಧ್ಯಾಯ, ವ್ಯವಸ್ಥಾಪಕರಾದ ಶ್ರೀ ನಟೇಶ್ ಕಾರಂತ್ ಹಾಗೂ ದೇವಳದ ಅರ್ಚಕ ಮಂಡಳಿಯ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.






