ಜನಮನ
ಅಮಾಸೆಬೈಲು ಶೆಟ್ಟಿಗಾರ್/ ಪದ್ಮಶಾಲಿ ಸಮಾಜ ಸೇವಾ ಸಂಘ: ಗಂಟಲು ಮತ್ತು ಹೃದಯ ಸಮಸ್ಯೆ ಪೀಡಿತರಿಗೆ ನೆರವು

Views: 220

ಕುಂದಾಪುರ: ಇಲ್ಲಿನ ಅಮಾಸೆಬೈಲು ವಲಯ ಶೆಟ್ಟಿಗಾರ್ /ಪದ್ಮಶಾಲಿ ಸಮಾಜ ಸೇವಾ ಸಂಘ ಇವರ ವತಿಯಿಂದ ಮಾಸಿಕ ಸಭೆಯು ಅಮಾಸೆಬೈಲು-ಬಳ್ಮನೆ ಶ್ರೀ ಚತುರ್ಮುಖ ಬ್ರಹ್ಮ ದೇವಸ್ಥಾನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಕರುಣಾಕರ್ ಶೆಟ್ಟಿಗಾರ್ ಬಳ್ಮನೆ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಪ್ರತಿ ತಿಂಗಳು ವಿಶೇಷ ಎಂಬಂತೆ ಈ ಭಾರಿ ಮಣಿಪಾಲದಲ್ಲಿ ಗಂಟಲು ಶಸ್ತ್ರ ಚಿಕಿತ್ಸೆ ಪಡೆಯುತ್ತಿರುವ ಚಂದ್ರಶೇಖರ್ ಶೆಟ್ಟಿಗಾರ್ ತಲಾರಿ- ಶಂಕರ್ ನಾರಾಯಣ ಮತ್ತು ಹೃದಯ ಸಮಸ್ಯೆಯಿಂದ ಬಳಲುತ್ತಿರುವ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಯರಾಮ ಶೆಟ್ಟಿಗಾರ್ ಇವರಿಗೆ ಸಂಘದ ನಿಧಿಯಿಂದ ತಲಾ 5,000 ಸಾವಿರ ರೂಪಾಯಿ ನೀಡುವುದಾಗಿ ತೀರ್ಮಾನಿಸಿದರು. ನಂತರ ಸಂಘದ ಪ್ರತಿನಿಧಿಗಳು ಅವರ ಮನೆಗೆ ತೆರಳಿ ಈ ಪರಿಹಾರದ ಮೊತ್ತವನ್ನು ನೀಡಿದರು.








