ಹೆಲ್ಮಟ್ ಇಲ್ಲದೆ ಬರುತ್ತಿದ್ದ ಬೈಕ್ ಸವಾರನನ್ನು ಅಡ್ಡಗಟ್ಟಿದ ಟ್ರಾಫಿಕ್ ಪೊಲೀಸ್, ಬೈಕ್‌ನಿಂದ ರಸ್ತೆಗೆ ಬಿದ್ದ ಮಗು ಸಾವು

Views: 216
ಕನ್ನಡ ಕರಾವಳಿ ಸುದ್ದಿ:ಮಂಡ್ಯದ ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಹೆಲ್ಮಟ್ ಹಾಕದೆ ಬರುತ್ತಿದ್ದ ಬೈಕ್ ಸವಾರನನ್ನು ಟ್ರಾಫಿಕ್ ಪೊಲೀಸ್ ಏಕಾಏಕಿ ಅಡ್ಡಗಟ್ಟಿದ ಪರಿಣಾಮ ದುರಂತವೊಂದು ಸಂಭವಿಸಿದೆ. ಬೈಕ್ ನಿಯಂತ್ರಣ ಕಳೆದುಕೊಂಡು ಅದರಲ್ಲಿ ಕುಳಿತ್ತಿದ್ದ ಮಗು ರಸ್ತೆಗೆ ಬಿದ್ದು ಪ್ರಾಣ ಕಳೆದುಕೊಂಡಿದೆ.
ವಾಣಿ – ಅಶೋಕ್ ದಂಪತಿಯ ಪುತ್ರಿ ಮೂರೂವರೆ ವರ್ಷದ ಹೃತೀಕ್ಷ ಮೃತ ಮಗು. ದಂಪತಿ ಮಂಡ್ಯದ ಮದ್ದೂರು ತಾಲೂಕಿನ ಗೊರವನ ಹಳ್ಳಿಯ ನಿವಾಸಿ. ಹೃತೀಕ್ಷಳಿಗೆ ನಾಯಿ ಕಚ್ಚಿತ್ತು. ಹೀಗಾಗಿ ಆಕೆಯನ್ನು ಮಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಟ್ರಾಫಿಕ್ ಪೊಲೀಸರು ಅಡಗಟ್ಟಿದ್ದಾರೆ. ಬೆಕ್ ನಿಯಂತಣ ತಪ್ಪಿದು. ದಂಪತಿ ಮಗು ಸಹಿತ ಕೆಳಗೆ ಬಿದ್ದಿದ್ದಾರೆ.
ಈ ಸಂದರ್ಭ ಹಿಂದಿನಿಂದ ಬಂದ ನಂದಿನಿ ಹಾಲಿನ ವಾಹನ ಆಕೆಯ ಮೇಲೆ ಹರಿದು, ಆಕೆ ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಮಂಡ್ಯ ಜಿಲ್ಲಾಸ್ಪತ್ರೆ ಮುಂಭಾಗ ಹೆದ್ದಾರಿಯಲ್ಲಿ ಮಗುವಿನ ಶವವಿಟ್ಟು ಪ್ರತಿಭಟನೆ ನಡೆಸಿದರು.ಈ ಘಟನೆಯ ಬಗ್ಗೆ ತೀವ್ರ ಆಕ್ರೋಶ ಕೇಳಿ ಬಂದಿದ್ದು, ತಪ್ಪಿಸ್ಥ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿ ಬಂದಿದೆ.
ಅಮಾನತು: ಇನ್ನು ಹೆಲ್ಕೆಟ್ ತಪಾಸಣೆ ಮಾಡುತ್ತಿದ್ದ ಮೂವರು ಎಎಸ್‌ಐಯನ್ನು ಅಮಾನತು ಮಾಡಲಾಗಿದೆ. ಮಂಡ್ಯ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಹೆಲ್ಮಟ್ ತಪಾಸಣೆ ಮಾಡುತ್ತಿದ್ದ ಮೂವರು ಎಎಸ್‌ಐಗಳನ್ನು ಅಮಾನತು ಮಾಡಿ ಆದೇಶಿಸಿದ್ದಾರೆ. ಎಎಸ್‌ಐಗಳಾದ ಜಯರಾಮ್, ನಾಗರಾಜ್, ಗುರುದೇವ್ ಅಮಾನತುಗೊಂಡವರು.