ಸ್ವಚ್ಛ ಸರ್ವೇಕ್ಷಣ-2023ರ ಸಮೀಕ್ಷೆ: ಕುಂದಾಪುರಕ್ಕೆ 6ನೇ ಸ್ಥಾನ

Views: 34
ಕುಂದಾಪುರ: ಕೇಂದ್ರ ಸರಕಾರದ ಸ್ವಚ್ಛ ಸರ್ವೇಕ್ಷಣ-2023ರ ಸಮೀಕ್ಷೆಯಲ್ಲಿ ಕುಂದಾಪುರ ಪುರಸಭೆಗೆ ರಾಜ್ಯದಲ್ಲಿ 6ನೇ ಸ್ಥಾನ ಲಭಿಸಿದೆ.
ಕೇಂದ್ರ ಸರಕಾರದ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯವು ವಾರ್ಷಿಕ ಸcತ್ಛತಾ ಸಮೀಕ್ಷೆ ನಡೆಸುತ್ತದೆ. ಪ್ರಸ್ತುತ ಸಾಲಿನ ಸ್ವತ್ಛ ಸರ್ವೇಕ್ಷಣ್-2023ರ ಸಮೀಕ್ಷೆಯಲ್ಲಿ 1 ಲಕ್ಷ ಜನಸಂಖ್ಯೆಯ ಒಳಗಿನ ಹಾಗೂ 1 ಲಕ್ಷ ಜನಸಂಖ್ಯೆ ಮೇಲ್ಪಟ್ಟ ನಗರಗಳೆಂದು ವರ್ಗೀಕರಿಸಿ ಶ್ರೇಯಾಂಕಗಳನ್ನು ನೀಡಲಾಗಿದೆ. 4 ಹಂತಗಳಲ್ಲಿ ಪರಿಶೀಲನೆ ನಡೆದಿತ್ತು. ಸೇವಾ ಮಟ್ಟದ ಪ್ರಗತಿ, ನಾಗರಿಕರ ಧ್ವನಿ ಅಡಿಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು ಉತ್ತಮವಾಗಿ ನಿರ್ವಹಿಸಿದ್ದು, ಸಾರ್ವಜನಿಕರು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.
ವರದಿಯ ಪ್ರಕಾರ, ಮೂಲದಲ್ಲಿ ತ್ಯಾಜ್ಯವನ್ನು ಬೇರ್ಪಡಿಸುವ ವಿಭಾಗದಲ್ಲಿ ಬೆಂಗಳೂರು ಶೇಕಡಾ 99ರಷ್ಟು ಸಾಧಿಸಿದೆ. ಆದರೆ ತ್ಯಾಜ್ಯ ವಿಲೇವಾರಿ ಪರಿಹಾರದಲ್ಲಿ ಶೂನ್ಯ ಸಾಧನೆ ಮಾಡಿದೆ. ನಗರವು ಸೇವಾ ಮಟ್ಟದ ಪ್ರಗತಿ ವಿಭಾಗದಲ್ಲಿ 4,830 ಅಂಕಗಳಿಗೆ 2,805.32 ಅಂಕಗಳು, ಪ್ರಮಾಣೀಕರಣ ವಿಭಾಗದಲ್ಲಿ 2,500ರಲ್ಲಿ 1,125 ಮತ್ತು ನಾಗರಿಕರ ಧ್ವನಿ ವಿಭಾಗದಲ್ಲಿ 2,170 ರಲ್ಲಿ 1,589.82 ಅಂಕಗಳನ್ನು ಗಳಿಸಿದೆ.