ಕರಾವಳಿ

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಕಾರ್ಯಗಾರ

Views: 59

ಬೃಹ್ಮಾವರ : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ ಇದರ ಬ್ರಹ್ಮಾವರ ವಲಯದ ಆಶ್ರಯದಲ್ಲಿ ಒಂದು ದಿನದ ಫೋಟೋಶಾಪ್ ಆರ್ಟಿಫಿಷಿಯಲ್ ಇಂತಲಿಜನ್ಸ್ (ಕ್ರತಕ ಬುದ್ದಿಮತ್ತೆ ) ಹಾಗೂ ಲೈಟ್ ರೂಮ್ ಕಾರ್ಯಾಗಾರ ಬ್ರಹ್ಮಾವರದ ಸಿಟಿ ಸೆಂಟರ್ ನಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರವನ್ನು ಪ್ರಸಿದ್ಧ ಛಾಯಾಗ್ರಾಹಕರು ಹಾಗೂ ಸಂಪನ್ಮೂಲ ವ್ಯಕ್ತಿಯಾದ ಬಾಬು ಮೈಸೂರು ನಡೆಸಿಕೊಟ್ಟರು.

ಛಾಯಾಗ್ರಾಹಕರಿಗೆ ಬಹು ಉಪಯುಕ್ತವಾದ ಈ ಶಿಬಿರದಲ್ಲಿ ಕ್ರತಕ ಬುದ್ಧಿಮತ್ತೆಯ ಬಳಕೆಯಿಂದ ಫೋಟೋಶಾಪ್ ನಲ್ಲಿ ಆದ ಬದಲಾವಣೆಗಳು, ಅದನ್ನು ಉದ್ಯಮದ ಅಭಿವೃದ್ಧಿಗೆ ಬಳಸಿಕೊಳ್ಳುವ ರೀತಿ, ಹಾಗೂ ಒಳಿತು ಕೆಡುಕುಗಳ ಬಗ್ಗೆ ಅಲ್ಲದೆ ಲೈಟ್ ರೂಮ್ ಬಗ್ಗೆ ಸವಿಸ್ತಾರವಾಗಿ ಶಿಬಿರಾರ್ಥಿ ಗಳಿಗೆ ತಿಳಿಸಿಕೊಟ್ಟರು.

ಉಭಯ ಜಿಲ್ಲೆಯ 150 ಕ್ಕೂ ಮಿಕ್ಕಿ ಛಾಯಾಗ್ರಾಹಕರು ಶಿಬಿರದ ಪ್ರಯೋಜನ ಪಡೆದುಕೊಂಡರು.  ಈ ಕಾರ್ಯಾಗಾರವನ್ನು ಜಿಲ್ಲಾಧ್ಯಕ್ಷರಾದ ಪದ್ಮಪ್ರಸಾದ್ ಜೈನ್ ಉದ್ಘಾಟಿಸಿದರು.ಬ್ರಹ್ಮಾವರ ವಲಯದ ಅಧ್ಯಕ್ಷರಾದ ಆಲ್ವಿನ್ ಆಂದ್ರಾದೆ ಸಭಾಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ಉಡುಪಿ ವಲಯದ ಅಧ್ಯಕ್ಷರಾದ ಸುಧೀರ್ ಶೆಟ್ಟಿ, ಬ್ರಹ್ಮಾವರದ ವಲಯದ ಗೌರವಧ್ಯಕ್ಷರಾದ ರಾಘವೇಂದ್ರ ಪೂಜಾರಿ, ಕಾರ್ಯದರ್ಶಿ ಜಿಲ್ಲಾ ಜೊತೆ ಕಾರ್ಯದರ್ಶಿ ಏರಿಕ್ ಡಿಸೋಜ ಮುಖ್ಯ ಅತಿಥಿಗಳಾಗಿದ್ದರು, ಕಾರ್ಯದರ್ಶಿ ಪ್ರತೀಶ್ ಕುಮಾರ್ ಪ್ರಾರ್ಥನೆ ನೆರವೇರಿಸಿದರು. ಸುನೀಲ್ ಪಾಂಡೇಶ್ವರ ಕಾರ್ಯಕ್ರಮ ನಿರೂಪಿಸಿದರು.

ಜಿಲ್ಲಾ ಉಪಾಧ್ಯಕ್ಷರಾದ ಜಯಕರ ಸುವರ್ಣ ಹಾಗೂ ವಿವಿಧ ಜಿಲ್ಲಾ ಹಾಗೂ ವಲಯದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಾಬು ಮೈಸೂರು ಇವರನ್ನು ವಲಯದ ವತಿಯಿಂದ ಸನ್ಮಾನಿಸಲಾಯಿತು.

ತರಬೇತಿಯ ಬಗ್ಗೆ, ಹಾಗೂ ವ್ಯವಸ್ಥೆಯ ಬಗ್ಗೆ ಶಿಬಿರಾರ್ಥಿಗಳು ತುಂಬು ಮೆಚ್ಚುಗೆ ವ್ಯಕ್ತಪಡಿಸಿದರು

Related Articles

Back to top button