ಸುರತ್ಕಲ್: ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

Views: 128
ಕನ್ನಡ ಕರಾವಳಿ ಸುದ್ದಿ: ಸುರತ್ಕಲ್ ಎನ್ಐಟಿಕೆ ಬೀಚ್‌ನಲ್ಲಿಸಮುದ್ರ ನೀರಿನ ಸೆಳೆತಕ್ಕೆ ಸಿಲುಕಿದ ಮುಂಬೈ ಮೂಲದ ಇಬ್ಬರು ವಿದ್ಯಾರ್ಥಿಗಳಲ್ಲಿ ಓರ್ವ ನಾಪತ್ತೆಯಾಗಿದ್ದು, ಮತ್ತೋರ್ವನನ್ನು ಲೈಫ್ ಗಾರ್ಡ್ ಸಮುದ್ರದಿಂದ ಮೇಲಕ್ಕೆತ್ತಿದರೂ ದುರಾದೃಷ್ಟವಶಾತ್ ಆತ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಮುಂಬೈ ಮೂಲದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಧ್ಯಾನ್ ಬಂಜನ್(18), ಎಸ್ಎಸ್ಎಲ್‌ಸಿ ವಿದ್ಯಾರ್ಥಿ ಹನೀಶ್ ಕುಲಾಲ್(15) ಸುರತ್ಕಲ್ ಸಮೀಪದ ಪುಚ್ಚಾಡಿ, ಪೊರಿಕಾನ ಉಮೇಶ್ ಅವರ ಪುತ್ರಿಗೆ ವಿವಾಹ ನಿಶ್ಚಿತವಾಗಿದ್ದು ಶನಿವಾರ ಮೆಹಂದಿ ಕಾರ್ಯಕ್ರಮ ಮುಗಿದಿತ್ತು. ಬುಧವಾರ ಮೂಡಬಿದಿರೆಯಲ್ಲಿ ವಿವಾಹ ನಡೆಯಬೇಕಿತ್ತು.ಮಂಗಳವಾರ ಸಂಬಂಧಿಕರು ತಮ್ಮ ಮಕ್ಕಳೊಂದಿಗೆ ಕಡಲ ತೀರಕ್ಕೆ ತೆರಳಿದ್ದರು. 4 ಗಂಟೆಯ ಹೊತ್ತಿಗೆ ಬೀಚ್‌ನಲ್ಲಿ ಈಜಾಡಿ ಸಂಜೆ 5.30ಕ್ಕೆ ಹಿಂದಿರುಗಲು ಸಿದ್ಧವಾಗಿದ್ದರು.ಈ ಸಂದರ್ಭದಲ್ಲಿ ದೊಡ್ಡ ತೆರೆಯೊಂದು ಬಂದು ಅಪ್ಪಳಿಸಿ ತೆರೆಯ ಹೊಡೆತಕ್ಕೆ ಸಿಲುಕಿದರು. ಕೂಡಲೇ ಸ್ಥಳೀಯರ ಸಹಾಯದಿಂದ ದಡಕ್ಕೆ ಎಳೆದು ತಂದು ಆಸ್ಪತ್ರೆಗೆ ಸಾಗಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ.ಆದರೆ ಹನೀಶ್ ಕುಲಾಲ್ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.