ಆರೋಗ್ಯ
ಸಾಸ್ತಾನ: ತಪಾಸಣೆಗೆಂದು ಕ್ಲಿನಿಕ್ ಗೆ ತೆರಳಿದ ಅನಾರೋಗ್ಯ ಪೀಡಿತ ಯುವತಿಗೆ ವೈದ್ಯರಿಂದ ಅನುಚಿತ ವರ್ತನೆ!

Views: 488
ಕನ್ನಡ ಕರಾವಳಿ ಸುದ್ದಿ: ಮುಂಬೈಯಲ್ಲಿ ವಾಸವಿರುವ ಸುಮಾರು 20 ವರ್ಷ ಪ್ರಾಯದ ಯುವತಿಯೊಬ್ಬಳು ಅನಾರೋಗ್ಯದ ಕಾರಣಕ್ಕೆ ತಪಾಸಣೆಗೆಂದು ಸಾಸ್ತಾನದಲ್ಲಿರುವ ಉಪಾಧ್ಯಾಯ ಕ್ಲಿನಿಕ್ ಗೆ ಹೋಗಿದ್ದಾಗ ವೈದ್ಯರಾದ ರಾಘವೇಂದ್ರ ಉಪಾಧ್ಯಾಯ ಯುವತಿಯೊಡನೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಲೈಂಗಿಕ ಕಿರುಕುಳಕ್ಕೆ ಒಳಗಾದ ಯುವತಿ ಮನೆಗೆ ಹೋಗಿ ವಿಷಯ ತಿಳಿಸಿದ್ದು, ಸ್ಥಳೀಯರೆಲ್ಲ ಸೇರಿ ಸಂಜೆ ಹೊತ್ತಿಗೆ ವೈದ್ಯರು ಬರುವ ವೇಳೆಗೆ ಕಾದು ರಾಘವೇಂದ್ರ ಉಪಾಧ್ಯಾಯ ಅವರನ್ನು ತರಾಟೆಗೆ ತೆಗೆದುಕೊಂಡು ಧರ್ಮದೇಟು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕೂಡಲೇ ಕೋಟ ಪೊಲೀಸರು ಸ್ಥಳಕ್ಕಾಗಮಿಸಿ, ಆರೋಪಿಯನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡು.ತನಿಖೆ ಮುಂದುವರಿಸಿದ್ದಾರೆ.