ಸರ್ಕಾರಿ ಇಲಾಖೆ,ಶಾಲೆಗಳಿಗೆ ಕೈಮುಗ್ಗ ನೇಕಾರರಿಂದ ಸಮವಸ್ತ್ರ ಪೂರೈಕೆ

Views: 27
ಸರ್ಕಾರಿ ಇಲಾಖೆ ಹಾಗೂ ಶಾಲೆಗಳಿಗೆ ನೀಡುವ ಸಮವಸ್ತ್ರಗಳನ್ನು ಕೈಮಗ್ಗ ಅಭಿವೃದ್ಧಿ ನಿಗಮದ ಮೂಲಕವೇ ಪೂರೈಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಜವಳಿ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.
ಮಕ್ಕಳಿಗೆ ನೀಡುವ ಸಮವಸ್ತ್ರ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಪೊಲೀಸ್, ಅಗ್ನಿಶಾಮಕ ದಳ,ಆರೋಗ್ಯ ಇಲಾಖೆ ಸೇರಿ ಇಲಾಖೆಯ ಸಮವಸ್ತ್ರಗಳನ್ನು ಪೂರೈಸುವುದರ ಮೂಲಕ ನೇಕಾರರ ಅಭಿವೃದ್ಧಿಗೆ ಬದ್ಧವಾಗಿದೆ.
ಶಾಸಕ ಸಿದ್ದು ಸವದಿ ಮಾತನಾಡಿ, ನಾನು ಕೈಮಗ್ಗ ಅಭಿವೃದ್ಧಿ ಮಂಡಳಿ ಅಧ್ಯಕ್ಷನಾಗಿದ್ದಾಗ ಹಲವು ಕ್ರಮ ವಹಿಸಬೇಕಾಯಿತು, ನೇಕಾರರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ವಿದ್ಯಾವಿಕಾಸ್ ಯೋಜನೆಯಡಿಯಲ್ಲಿ ಪೂರೈಸುವ ಶಾಲಾ ಮಕ್ಕಳ ಸಮವಸ್ತ್ರವನ್ನು ನೇಕಾರರಿಂದ ಸಿದ್ಧಪಡಿಸಲಾಗುತ್ತಿತ್ತು. ಆದರೆ, ಮಾರ್ವಾಡಿಗಳಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಸಮವಸ್ತ್ರ ಕಳಪೆಯಾಗಿದೆ ಎಂದು ಆರೋಪಿಸಿದರು.
ಕೇವಲ ನಿಗಮ ಮಂಡಳಿ ಮಾತ್ರವಲ್ಲದೆ ಈ ಸಮವಸ್ತ್ರ ಪರಿಶೀಲನೆ ಮಾಡಿರುವ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧವು ತನಿಖೆಯಾಗಬೇಕು.ಉಚಿತ ವಿದ್ಯುತ್ ಎಂದು ಸರ್ಕಾರ ಹೇಳುತ್ತದೆ ಆದರೆ ವಿದ್ಯುತ್ ಬಿಲ್ಲನ್ನು ಡಬ್ಬಲ್ ಮಾಡಿ ಸಂಕಷ್ಟದಲ್ಲಿರುವ ನೇಕಾರರನ್ನು ರಕ್ಷಿಸುವ ಬದಲು ಬಲಿಕೊಡುತ್ತಿದ್ದೀರಿ ಅವರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಅವರಿಗೆ ಸರಕಾರದ ವತಿಯಿಂದ ಭರವಸೆ ಕೊಡಬೇಕು ಎಂದು ಸಿದ್ದು ಸವದಿ ಹೇಳಿ ಸರ್ಕಾರವನ್ನು ಅಗ್ರಹಿಸಿದರು..