ಸಾಮಾಜಿಕ
ಸಂವಿಧಾನ ಪೀಠಿಕೆ ಓದುವ ಮೂಲಕ ನವ ಜೀವನಕ್ಕೆ ಕಾಲಿಟ್ಟ ನವ ಜೋಡಿಗಳು

Views: 15
ಅಫಜಲಪುರ:ಆಡಂಬರದ ಮದುವೆಯಾಗುವ ಇಂದಿನ ಕಾಲಘಟ್ಟದಲ್ಲಿ ಸರಳವಾಗಿ ಸಂವಿಧಾನ ಪೀಠಿಕೆ ಓದುವ ಮೂಲಕ ನವ ಜೋಡಿಗಳು ವಿಶೇಷ ರೀತಿಯಲ್ಲಿ ವಿವಾಹವಾಗಿದ್ದಾರೆ.
ಪಟ್ಟಣದ ಶೆಟ್ಟಿ ಫಂಕ್ಷನ್ ಹಾಲ್ ನಲ್ಲಿ ಗೌರ(ಬಿ) ಗ್ರಾಮದ ಯುವಕ ರವಿ ಗೌರ ಮತ್ತು ವಾಡಿ ಗ್ರಾಮದ ಯುವತಿ ಪ್ರಿಯಾಂಕಾ ಎನ್ನುವ ನವಜೋಡಿಗಳು ಬುದ್ಧ, ಬಸವ, ಅಂಬೇಡ್ಕರ್ ಮತ್ತು ಸಾವಿತ್ರಿಬಾಯಿ ಫುಲೆ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಭಾರತೀಯ ಸಂವಿಧಾನ ಪೀಠಿಕೆ ಓದುವ ಮೂಲಕ ಸರಳ ವಿವಾಹಕ್ಕೆ ಸಾಕ್ಷಿಯಾದರು.
ಶಿವಶರಣಪ್ಪ ಗೌರ ನವ ಜೋಡಿಗಳಿಗೆ ಸಂವಿಧಾನದ ಪೀಠಿಕೆ ಬೋಧಿಸುವುದರೊಂದಿಗೆ ನವ ಜೋಡಿಗಳಿಗೆ ಶುಭ ಹಾರೈಸಿ, ನಮ್ಮ ದೇಶದ ಸಂವಿಧಾನ ಎಲ್ಲರಿಗೂ ಸಮಾನತೆ ನೀಡಿ ಹೆಣ್ಣು ಮತ್ತು ಗಂಡಿಗೆ ಯಾವುದೇ ತಾರತಮ್ಯವಿಲ್ಲದಂತೆ ಸಮಾನ ಅವಕಾಶ ನೀಡಿದ್ದು ಡಾ. ಬಿ.ಆರ್ ಅಂಬೇಡ್ಕರ್ ರವರ ಸಂವಿಧಾನ. ಹೀಗಾಗಿ ಒಬ್ಬ ನೈಜ ಭಾರತೀಯನಿಗೆ ಸಂವಿಧಾನಕ್ಕಿಂತ ಶ್ರೇಷ್ಠ ಗ್ರಂಥ ಯಾವುದೂ ಇಲ್ಲ ಎಂದು ಅವರು ಹೇಳಿದರು.