ಇತರೆ
ಶೇಡಿಮನೆ :ದನ ಮೇಯಿಸುತ್ತಿದ್ದ ಬಾಲಕಿ ಹೊಳಗೆ ಬಿದ್ದು ಸಾವು

Views: 0
ಅಮಾಸೆಬೈಲು ಸಮೀಪ ಶೇಡಿಮನೆ ಎಂಬಲ್ಲಿ ತುಂಬಿ ಹರಿಯುತ್ತಿರುವ ಹೊಳೆಗೆ ಆಕಸ್ಮಿಕವಾಗಿ ಬಿದ್ದು ಬಾಲಕಿಯೊಬ್ಬಳು ಸಾವನಪ್ಪಿದ ಘಟನೆ ನಡೆದಿದೆ.
ಮೃತ ಬಾಲಕಿ ರಚನಾ (12) ಶೇಡಿಮನೆ ಗ್ರಾಮದ ಬಡಬೈಲು ದರ್ಕಾಸು ಪ್ರಭಾಕರ್ ಶೆಟ್ಟಿ ಅವರ ಪುತ್ರಿ ಎಂದು ತಿಳಿದುಬಂದಿದೆ.
ಭಾನುವಾರ ಮನೆಯ ಹತ್ತಿರದ ಹೊಳೆಯ ಬದಿಯ ಗದ್ದೆಯಲ್ಲಿ ದನ ಕರುಗಳನ್ನು ಮೇಯಿಸುತ್ತಿರುವ ಸಂದರ್ಭದಲ್ಲಿ ರಚನಾ ಗಂಗಡ ಬೈಲಿನ ಹೊಳೆಗೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿರುತ್ತಾಳೆ. ಇಲ್ಲಿಯೇ ಸಮೀಪ 2 ಕಿಲೋಮೀಟರ್ ದೂರದ ಶೇಡಿಮನೆ ಗಂಗಡ ಮಂಡುಬಯಲು ಹೊಳೆಯಲ್ಲಿ ಬಾಲಕಿ ರಚನಾ ಮೃತದೇಹ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಅಮಾವಾಸೆಬೈಲು ಠಾಣಾ ಪೊಲೀಸ್ ಹಾಗೂ ಕಂದಾಯ ಇಲಾಖೆಯವರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.