ಸಾಮಾಜಿಕ

ಶಿವರಾತ್ರಿಯಂದೇ ಘೋರ ದುರಂತ: ಮಗನ ಎದುರಲ್ಲೇ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಪತಿ

Views: 195

ಕನ್ನಡ ಕರಾವಳಿ ಸುದ್ದಿ: ಮಹಾಶಿವರಾತ್ರಿಯ ದಿನದಂದೇ ಮಗನ ಎದುರಲ್ಲಿ ಪತ್ನಿಯನ್ನು ಕೊಂದು ಪತಿ ನೇಣಿಗೆ ಶರಣಾದ ಘಟನೆ ಬೆಂಗಳೂರಿನ ತಿಗಳರಪಾಳ್ಯದ ಮುಬಾರಕ್ ನಗರದಲ್ಲಿ ನಡೆದಿದೆ.

ಮೃತರನ್ನು ಸುರೇಶ್ (40) ಹಾಗೂ ಈತನ ಪತ್ನಿ ಮಮತಾ (33) ಎಂದು ಗುರುತಿಸಲಾಗಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ಸುರೇಶ್ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಆದರೆ ಇತ್ತೀಚಿಗೆ ಸರಿಯಾಗಿ ಕೆಲಸಕ್ಕೂ ಹೋಗುತ್ತಿರಲಿಲ್ಲ ಇದರಿಂದ ಸುರೇಶ ಹಾಗೂ ಪತ್ನಿ ಮಮತಾ ನಡುವೆ ಆಗಾಗ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು.

ಗಲಾಟೆ ವಿಕೋಪಕ್ಕೆ ತಿರುಗಿ ಪತಿಯೊಬ್ಬ ತಮ್ಮ 6 ವರ್ಷದ ಮಗಳ ಎದುರಲ್ಲೇ ಪತ್ನಿಯನ್ನು ಕೊಂದು, ಬಳಿಕ ಮನನೊಂದು ತಾನು ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಬ್ಯಾಡರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Back to top button