ಶಾಲಾ ಅಂಗಳದಲ್ಲಿ ಹಠಾತ್ತನೇ ಕುಸಿದು ಬಿದ್ದ 10ನೇ ತರಗತಿಯ ವಿದ್ಯಾರ್ಥಿನಿ ಸಾವು

Views: 128
ಕನ್ನಡ ಕರಾವಳಿ ಸುದ್ದಿ: ಅವಳು 10ನೇ ಕ್ಲಾಸಿನ ಬಾಲಕಿ. ಎಂದಿನಂತೆ ಶಾಲೆಯ ಸಮವಸ್ತ್ರ ಧರಿಸಿಕೊಂಡು ಶಾಲೆಗೆ ಹೊರಟಿದ್ದಳು. ಗುರುವಾರ ಮುಂಜಾನೆ ಶಾಲಾ ಅಂಗಳದಲ್ಲಿ ಏಕಾಏಕಿ ಕುಸಿದು ಬಿದ್ದಳು. ಏನಾಯ್ತು ಎಂದು ನೋಡುವಷ್ಟರಲ್ಲಿ 16ರ ಬಾಲೆಗೆ ಹೃದಯಾಘಾತವಾಗಿತ್ತು. ಕೂಡಲೇ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರು ಕೂಡ ಬಾಲಕಿ ಬದುಕುಳಿಯಲಿಲ್ಲ.
ಇಂತಹ ಒಂದು ದುರಂತ ಘಟನೆ ತೆಲಂಗಾಣದ ಕಮಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಶ್ರೀನಿಧಿ ಎಂಬ ಬಾಲಕ್ಕಿ ರಮಾರೆಡ್ಡಿ ಮಂಡಲ್ನ ಸಿಂಗಾರಪಲ್ಲಿ ಎಂಬ ಗ್ರಾಮದ ಹುಡುಗಿ. ಕಮಾರರೆಡ್ಡಿಯ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಗುರುವಾರ ಎಂದಿನಂತೆ ಶಾಲೆಗೆ ಬಂದ ಮಗು ಏಕಾಏಕಿ ಕುಸಿದು ಬಿದ್ದಿದ್ದಾಳೆ. ಎದೆ ನೋವು ಕಾಣಿಸಿಕೊಂಡು ಶಾಲೆಯ ಅಂಗಳದಲ್ಲಿಯೇ ಬಿದ್ದುಬಿಟ್ಟಿದ್ದಾಳೆ. ಅದನ್ನು ನೋಡಿದ ಶಾಲಾ ಶಿಕ್ಷಕರು ತಡಮಾಡದೇ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಆರಂಭಿಕ ಚಿಕಿತ್ಸೆ ನೀಡಿದ್ದಾರೆ. ಸಿಪಿಆರ್ ಮಾಡಿದ್ದಾರೆ, ಆದರೆ ಬಾಲಕ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರು ಚೆಲ್ಲಿದ್ದಾಳೆ. ವೈದ್ಯರು ಶ್ರೀನಿಧಿ ಅಸುನೀಗಿದ್ದಾಳೆಂದು ಹೇಳಿದ್ದಾರೆ.