ವಿದ್ಯಾರ್ಥಿನಿಯರನ್ನು ಅಮಾನುಷವಾಗಿ ಥಳಿಸಿದ ಪ್ರಿನ್ಸಿಪಾಲ್!

Views: 147
ಕನ್ನಡ ಕರಾವಳಿ ಸುದ್ದಿ: ತೆಲಂಗಾಣದ ವಿಕಾರಾಬಾದ್‍ನಲ್ಲಿ ಶಾಲಾ ಪ್ರಾಂಶುಪಾಲರೊಬ್ಬರು ಅನುಮತಿ ಇಲ್ಲದೆ ಶಾಲಾ ಆವರಣದಿಂದ ಹೊರಬಂದ ಮೂವರು ವಿದ್ಯಾರ್ಥಿನಿಯರಿಗೆ ಹಿಗ್ಗಾಮಗ್ಗಾ ಥಳಿಸಿದ್ದಾರೆ.
ಪ್ರಿನ್ಸಿಪಾಲ್ ಶೈಲಲತಾ ಕ್ಲಾಸ್ ರೂಂನಲ್ಲಿ ತಪ್ಪು ಮಾಡಿದ ವಿದ್ಯಾರ್ಥಿನಿಯರನ್ನು ತನ್ನ ಮುಂದೆ ನಿಲ್ಲಿಸಿಕೊಂಡಿದ್ದು, ಆಗ ವಿದ್ಯಾರ್ಥಿನಿಯೊಬ್ಬಳು ಕೈ ಮುಗಿದು ಕ್ಷಮೆಯಾಚಿಸಿದ್ದಾಳೆ. ಆದರೆ ಪ್ರಿನ್ಸಿಪಾಲ್ ಪುಸ್ತಕವನ್ನು ಮಡಚಿಕೊಂಡು ಅದರಿಂದ ಅವರಿಗೆ ಕಪಾಳಮೋಕ್ಷ ಮಾಡಿದ್ದಾಳೆ. ನಂತರ ಅವರನ್ನು ತರಾಟೆಗೆ ತೆಗೆದುಕೊಂಡು ಮತ್ತೆ ಕೈಗಳಿಂದ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ.
ವಿಕಾರಾಬಾದ್‍ನ ಕೊಟ್ಟಗುಡೆಮ್ ಸಮಾಜ ಕಲ್ಯಾಣ ಬಾಲಕಿಯರ ವಸತಿ ಶಾಲೆ ಮತ್ತು ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಈ ಶಾಲೆಯಲ್ಲಿ ಪ್ರಾಂಶುಪಾಲರು ಅನುಮತಿಯಿಲ್ಲದೇ ಯಾವುದೇ ವಿದ್ಯಾರ್ಥಿ ಶಾಲಾ ಆವರಣದಿಂದ ಹೊರಹೋಗದಂತೆ ನಿಯಮ ವಿಧಿಸಲಾಗಿತ್ತು. ಆದರೂ ಈ ಮೂರು ವಿದ್ಯಾರ್ಥಿನಿಯರು ಪ್ರಿನ್ಸಿಪಾಲ್ ಅನುಮತಿಯಿಲ್ಲದೆ ಶಾಲಾ ಆವರಣದಿಂದ ಹೊರಹೋಗಲು ಪ್ರಯತ್ನಿಸಿದ್ದಾರೆ. ಹಾಗಾಗಿ ಆಕೆ ಇವರನ್ನು ಶಿಕ್ಷಿಸಿದ್ದಾರಂತೆ